ಮೈಸೂರು: ಮಂಗಳೂರಿನಲ್ಲಿ ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳ ಹೇಯಾ ಕೃತ್ಯ ಇದು ಎಂದು ಗಲಭೆ ವಿಡಿಯೋ ಕುರಿತು ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿದ್ದಾರೆ.ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದರು, ಕಲ್ಲುಗಳನ್ನು ತಂದು ಎಸೆದಿದ್ದಾರೆ. ಐಸಿಯೂ ಒಳಗೆ ಹೋಗಿ ಗಲಾಟೆ ಮಾಡಿದ್ದಾರೆ. ಇಂತದ್ದನ್ನೆಲ್ಲ ಟಿಪ್ಪು ವಂಶಸ್ಥರು ಮಾತ್ರ ಮಾಡುವುದಕ್ಕೆ ಸಾಧ್ಯ ಎಂದು ವಾಗ್ದಾಳಿ ನಡೆಸಿದರು. ಕಲ್ಲು ತೂರಿದವರನ್ನು ಸಿದ್ದರಾಮಯ್ಯ ಅಮಾಯಕರು ಎಂದು ಹೇಳುತ್ತಾರೆ. ಸಿಸಿಟಿವಿ ದೃಶ್ಯ ನೋಡಿ ಈಗ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಮಾತನಾಡಲಿ ಎಂದು ಆಗ್ರಹಿಸಿದರು.ಕಲ್ಲಿನಿಂದ ಹೊಡೆದರೆ ಜನ ಬದುಕುತ್ತಾರಾ. ತಮ್ಮ ಪ್ರಾಣ ಹೋಗುತ್ತಿದ್ರು ಪೊಲೀಸರು ಜನರ ರಕ್ಷಣೆಗೆ ನಿಂತಿದ್ದಾರೆ. ಅವರ ಕರ್ತವ್ಯದ ಬಗ್ಗೆ ಮಾತನಾಡುವವರು ಆತ್ಮಸಾಕ್ಷಿ ಕೇಳಿಕೊಳ್ಳಲಿ ಎಂದ ಅವರು, ಸಿದ್ದರಾಮಯ್ಯ, ರಮೇಶ್ ಕುಮಾರ್ ಮಂಗಳೂರಿಗೆ ಗನಂಧಾರಿ ಕೆಲಸ ಮಾಡಲು ಹೋಗಿರಲಿಲ್ಲ. ತಮ್ಮ ಮರಿಟಿಪ್ಪುಗಳು ಮಾಡಿರುವ ತಪ್ಪು ಮುಚ್ಚಲು ಹೋಗುತ್ತಿದ್ದರು ಎನ್ನುವುದು ಇದರಲ್ಲಿ ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.ಸುರೇಶ್ ಅಂಗಡಿ ಹೇಳಿರುವ ಮಾತಿಗೆ ನಾನು ಬದ್ದ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿ ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.Sign in to your account
Username or Email Address


Password

 Remember Me


