ಚಿಕ್ಕಮಗಳೂರು: ಹುಟ್ಟುವಾಗಲೇ ನಾಲಿಗೆಯನ್ನು ಬಾಯಿಯ ಒಂದು ತುದಿಯಿಂದ ಹೊರಹಾಕಿಕೊಂಡು ಮೇಲ್ದುಟಿಯನ್ನ ಸೀಳಿಕೊಂಡ ವಿಚಿತ್ರವಾದ ಕರು ಹುಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‍ನ ಸಮೀಪದ ಬಿನ್ನಡಿ ಗ್ರಾಮದ ಸುರೇಶ್‍ಗೌಡ ಎಂಬವರ ಕೆಂಪಿ ಎಂಬ ಹಸು ಸೋಮವಾರ ಬೆಳಗ್ಗೆ ಕರುವಿಗೆ ಜನ್ಮ ನೀಡಿತ್ತು. ಆದರೆ ಹೆಣ್ಣು ಕರು ಹುಟ್ಟುವಾಗಲೇ ವಿಚಿತ್ರವಾಗಿ ಹುಟ್ಟಿದ್ದು ನಾಲಿಗೆಯನ್ನು ಹೊರಹಾಕಿಕೊಂಡು ಮೇಲ್ದುಟಿಯನ್ನ ಸೀಳಿಕೊಂಡಿದೆ.ಪ್ರಾಣಿಗಳನ್ನು ಇಷ್ಟಪಟ್ಟು ಸಾಕುವ ಸುರೇಶ್ ಗೌಡರು ಕರುವಿನ ಸ್ಥಿತಿ ಕಂಡು ಮಮ್ಮಲು ಮರುಗಿದ್ದಾರೆ. ಅಲ್ಲದೆ ಕರುವಿಗೆ ಎದ್ದು ನಿಲ್ಲುವ ಶಕ್ತಿಯೂ ಇಲ್ಲದಂತಾಗಿದೆ. ಎಬ್ಬಿಸಿ ನಿಲ್ಲಿಸಿದ್ರು ಸೊಂಟ ಹಾಗೂ ಕಾಲಿನಲ್ಲಿ ಬಲವಿಲ್ಲದೆ ಕೆಳಗೆ ಬಿಳುತ್ತಿದೆ. ತಾಯಿಯ ಬಳಿ ನಿಂತು ಹಾಲು ಕುಡಿಯುವ ಶಕ್ತಿಯೂ ಕರುವಿಗೆ ಇಲ್ಲದಂತಾಗಿದೆ.ಸ್ಥಳಕ್ಕೆ ಭೇಟಿ ನೀಡಿರುವ ಪಶು ವೈದ್ಯ ಚಿಕಿತ್ಸಿಕರು, ನಾಲ್ಕು ದಿನ ಕಳೆಯಲಿ, ಹಾಲು ಕುಡಿದ ಮೇಲೆ ದೇಹಕ್ಕೆ ಶಕ್ತಿ ಬಂದು ಎದ್ದು ನಿಲ್ಲಬಹುದು ಎಂದು ಹೇಳಿದ್ದಾರೆ. ಆದರೆ ನಾಲ್ಕು ದಿನಗಳ ಕಾಲ ಹಸುವಿನಿಂದ ಹಾಲು ಕರೆದು ಒಳಲೆ ಮೂಲಕ ಹಾಲು ಕುಡಿಸುವಂತೆ ವೈದ್ಯರು ಸುರೇಶ್ ಗೌಡರವರಿಗೆ ಸೂಚಿಸಿದ್ದಾರೆ.Sign in to your account
Username or Email Address


Password

 Remember Me


