ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರು ಪೊಲೀಸರ ರಿವಾಲ್ವರ್ ಸದ್ದು ಮಾಡಿದೆ.ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಬಾಬು ಎನ್ನುವ ವ್ಯಕ್ತಿಯ ಕಾಲಿಗೆ ಶೂಟ್ ಮಾಡಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಘು ಅಲಿಯಾಸ್ ಕ್ಯಾಟ್ ರಘು ಎಂಬವರನ್ನು ಕೊಲೆ ಮಾಡಿದ್ದ ಆರೋಪಿಯಾಗಿದ್ದ ಬಾಬುವನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಲು ಹೋಗಿದ್ದಾಗ ಫೈರಿಂಗ್ ಮಾಡಿದ್ದಾರೆ.ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ಬಾಬು ವಾಸವಾಗಿದ್ದನು. ಆತನನ್ನು ವಶಕ್ಕೆ ಪಡೆಯಲು ಹೋಗಿದ್ದ ಪೊಲೀಸರ ಮೇಲೆ ಬಾಬು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಸಮಯದಲ್ಲಿ ಪೊಲೀಸರು ತಮ್ಮ ರಕ್ಷಣೆಗಾಗಿ ಬಾಬು ಕಾಲಿಗೆ ಗುಂಡನ್ನು ಹೊಡೆದಿದ್ದಾರೆ.ನಂದಿನಿ ಲೇಔಟ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೆಂಕಟ್ ಬಾಬು ಕಾಲಿಗೆ ಗುಂಡನ್ನು ಹಾರಿಸಿದ್ದು, ರಘು ಕೊಲೆ ಕೇಸ್ ನಲ್ಲಿ ಎ2 ಆರೋಪಿಯಾಗಿರುವ ಬಾಬು ಪಿಎಸ್‍ಐ ಹಾಗೂ ಪಿಸಿ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಬಾಬು ಹಾಗೂ ಪಿಸಿ ಮತ್ತು ಪಿಎಸ್‍ಐ ಮೂರು ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರಿದಿದೆ.Sign in to your account
Username or Email Address


Password

 Remember Me


