ಚಾಮರಾಜನಗರ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತೆರಕಣಾಂಬಿ ಸಮೀಪದ ಹುಲುಗನಮುರುಡಿ ಬೆಟ್ಟದ ಸಮೀಪ ನಡೆದಿದೆ.ಕುಮಚಹಳ್ಳಿ ನಿವಾಸಿ ಶಿವಲಿಂಗಪ್ಪ (60) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದು, ಮಗನೊಂದಿಗೆ ಜಗಳವಾಡಿ ಮನನೊಂದು ಡಿಸೆಂಬರ್ 14ರಂದು ನಾಪತ್ತೆಯಾಗಿದ್ದರು. ಸದ್ಯ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸಾಲ ಮಾಡಿ ಖರೀದಿ ಮಾಡಿದ್ದ ಜೆಸಿಬಿ ವಿಚಾರಕ್ಕೆ ಪುತ್ರ ಹಾಗೂ ಶಿವಲಿಂಗಪ್ಪ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಗ್ರಾಮದಲ್ಲಿರುವ ಮಠಕ್ಕೆ ತೆರಳುತ್ತೇನೆಂದು ಮನೆಯವರಿಗೆ ಹೇಳಿದ್ದ ಶಿವಲಿಂಗಪ್ಪ ಅವರು, ಬೆಟ್ಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಘಟನೆ ಕುರಿತು ಮಾಹಿತಿ ಪಡೆದಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


