ಚಿಕ್ಕಬಳ್ಳಾಪುರ: ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆಯೋದು ಸಾಮಾನ್ಯ ಆದರೆ ಎರಡು ಕೋತಿಗಳ ಗುಂಪು ಗ್ಯಾಂಗ್ ವಾರ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ನಡೆದಿದೆ.ಚಿಂತಾಮಣಿ ನಗರದ ಎನ್.ಆರ್ ಬಡಾವಣೆ ಬಳಿ ಎರಡು ಕೋತಿಗಳ ಗುಂಪಿನ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಗಲಾಟೆ ನಡೆದಿದೆ. ಕೋತಿಗಳ ಗುಂಪುಗಳು ನಾನಾ, ನೀನಾ ಅಂತ ಕಾದಾಡಿದ್ದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೋತಿಗಳ ಗುಂಪಿನ ಗ್ಯಾಂಗ್ ವಾರ್ ವಿಡಿಯೋವನ್ನ ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು ವಾನರ ಕಾದಾಟ ಬೆಚ್ಚಿಬೀಳಿಸುವಂತಿದೆ.ಅದ್ಯಾವ ಕಾರಣಕ್ಕೆ ಈ ಕೋತಿಗಳು ಕಾದಾಡಿದವೋ ಗೊತ್ತಿಲ್ಲ. ಆದರೆ ಮೈ ಕೈ ಗಾಯ ಆಗಿ ರಕ್ತ ಬರೋವವರೆಗೂ ಈ ಕೋತಿಗಳು ಬಡಿದಾಡಿಕೊಂಡಿವೆ. ಕೊನೆಗೆ ಸಾರ್ವಜನಿಕರು ಕೋತಿಗಳನ್ನ ಚದುರಿಸಿ ಕಾಳಗಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸಿದರೂ ಕಾದಾಟ ನಿಲ್ಲಿಸದ ಕೋತಿಗಳು ರಸ್ತೆ ಬದಿಯ ಅಂಗಡಿಗಳ ಓಳ ಭಾಗಕ್ಕೂ ನುಗ್ಗಿ ಕಿತ್ತಾಡಿವೆ.ಚಿಂತಾಮಣಿ ನಗರದಲ್ಲಿ ಕೋತಿಗಳ ಉಪಟಳ ಮೀತಿ ಮೀರಿದ್ದು, ಸಾರ್ವಜನಿಕರು ಕೋತಿಗಳ ಕಾಟಕ್ಕೆ ಬ್ರೇಕ್ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.Sign in to your account
Username or Email Address


Password

 Remember Me


