ಚಾಮರಾಜನಗರ: ಪ್ರತಿಭಟನೆ ನಡುವೆಯೂ ರೋಗಿಗಳು ಹೋಗುತ್ತಿದ್ದ ಅಂಬುಲೆನ್ಸ್‌ಗೆ ದಾರಿ ಮಾಡಿ ಕೊಟ್ಟು ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಗಡಿ ಜಿಲ್ಲೆ ಚಾಮರಾಜನಗರದ ಭುವನೇಶ್ವರಿ ವೃತ್ತದ ಬಳಿ ಇಂದು ಪೌರತ್ವ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸುಮಾರು ಎರಡರಿಂದ ಮೂರು ಸಾವಿರ ಜನರು ಭಾಗವಹಿಸಿದ್ದು, ಪೌರತ್ವ ಕಾಯ್ದೆ ವಿರುದ್ಧ ಧಿಕ್ಕಾರ ಕೂಗುತ್ತಿದ್ದರು.ಪ್ರತಿಭಟನೆ ನಿರತ ವೇಳೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಮೂರು ಅಂಬುಲೆನ್ಸ್‌ಗಳಿಗೆ ಪ್ರತಿಭಟನಾಕಾರರು ದಾರಿ ಮಾಡಿಕೊಟ್ಟಿದ್ದಾರೆ. ಎಲ್ಲಾ ಪ್ರತಿಭಟನಾ ನಿರತರು ಒಟ್ಟಾಗಿ ಸೇರಿ ಅಂಬುಲೆನ್ಸ್‌ಗಳು ರೋಗಿಗಳನ್ನು ಕರೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.Sign in to your account
Username or Email Address


Password

 Remember Me


