ಶಿವಮೊಗ್ಗ: ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿ ಯಾರು? ಸಿದ್ದರಾಮಯ್ಯ ಅವರ ಯಡಿಯೂರಪ್ಪನವರ ಎಂಬ ಅನುಮಾನವನ್ನು ಶಿವಮೊಗ್ಗದ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಹುಟ್ಟಿಸಿದೆ.ಶಿವಮೊಗ್ಗದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಪ್ರವೇಶದಲ್ಲಿಯೇ ಹಸಿರು ಕರ್ನಾಟಕ ಅಭಿಯಾನ ನೀರಿಗಾಗಿ ಅರಣ್ಯ ಎಂಬ ಪೋಸ್ಟರ್ ಹಾಕಿದ್ದಾರೆ. ಈ ಪೋಸ್ಟರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಅರಣ್ಯ ಸಚಿವ ರಮಾನಾಥ್ ರೈ ಎನ್ನುವ ಭಾವಚಿತ್ರ ಹಾಕಿದ್ದಾರೆ.ಬಹುಶಃ ಈ ಪೋಸ್ಟರ್ ಹಳೆಯದ್ದು ಇರಬಹುದು. ಆದರೆ ಪ್ರತಿನಿತ್ಯ ಅರಣ್ಯ ಕಚೇರಿಗೆ ನೂರಾರು ಮಂದಿ ಸಾರ್ವಜನಿಕರು ಬರುತ್ತಿರುತ್ತಾರೆ. ಈ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದ್ದು, ಸಾರ್ವಜನಿಕರಿಗೆ ಗೊಂದಲ ಉಂಟು ಮಾಡುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹಳೆಯ ಪೋಸ್ಟರ್ ತೆಗೆದು ಹಾಕಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


