ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.ಇತ್ತೀಚೆಗೆ ರಕ್ಷಿತ್ ತಮ್ಮ ಮುಂಬರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ತಮಿಳು ಭಾಷೆಯ ಚಿತ್ರವನ್ನು ಪ್ರಮೋಟ್ ಮಾಡಲು ಚೆನ್ನೈಗೆ ತೆರಳಿದ್ದರು.ಚೆನ್ನೈಯಲ್ಲಿ ಪ್ರತಿಕೆಯೊಂದು ರಕ್ಷಿತ್ ಅವರ ಸಂದರ್ಶನ ನಡೆಸಿತು. ಈ ವೇಳೆ ಸಂದರ್ಶಕ, ರಕ್ಷಿತ್‍ಗೆ ಸಾಂತಾ ಕ್ಲಾಸ್ ಆಗಲು ಹೇಳಿದ್ದರು. ಈ ಸಂದರ್ಭದಲ್ಲಿ ಸಂದರ್ಶಕ ರಶ್ಮಿಕಾ ಅವರ ಹೆಸರು ಹೇಳಿದಾಗ, ರಕ್ಷಿತ್ ಅವರಿಗೆ ಶುಭ ಹಾರೈಸಿದರು.ರಶ್ಮಿಕಾ ಬಗ್ಗೆ ಮಾತನಾಡಿದ ರಕ್ಷಿತ್, ಅವರು ಯಾವಾಗಲೂ ದೊಡ್ಡದಾಗಿ ಕನಸು ಕಾಣುತ್ತಾರೆ. ನನಗೆ ರಶ್ಮಿಕಾರ ಹಿಂದಿನ ಜೀವನದ ಬಗ್ಗೆ ತಿಳಿದಿದೆ. ಅವರಿಗೆ ಈ ಕನಸುಗಳು ಎಲ್ಲಿಂದ ಬರುತ್ತದೆ ಎಂಬುದು ನನಗೆ ತಿಳಿದಿದೆ. ಸಾಂತಾ ಅವರ ಎಲ್ಲ ಕನಸನ್ನು ನನಸು ಮಾಡಲಿ ಎಂದು ಬಯಸುತ್ತೇನೆ ಎಂದರು.ಅವನೇ ಶ್ರೀಮನ್ನಾರಾಯಣ 5 ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಇದೇ ಮೊದಲ ಬಾರಿಗೆ ನಟ ರಕ್ಷಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ. ಈ ಸಿನಿಮಾವನ್ನು ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ.ಕನ್ನಡದಲ್ಲಿ ಈ ಚಿತ್ರ ಡಿಸೆಂಬರ್ 27ರಂದು ಬಿಡುಗಡೆಯಾಗಲಿದೆ. 2020, ಜನವರಿ 1ರಂದು ತೆಲುಗು ಭಾಷೆಯಲ್ಲಿ, ಜನವರಿ 3ರಂದು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಗೂ ಜನವರಿ 16ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.Sign in to your account
Username or Email Address


Password

 Remember Me


