– ವಿಪಕ್ಷಗಳಿಗೆ ಮೋದಿಯವರ ಭಯ ಇದೆಬೆಂಗಳೂರು: ಒಂದು ದೇಶ ಒಂದು ಚುನಾವಣೆಯಿಂದ (One Nation One Election) ಅನಗತ್ಯ ವೆಚ್ಚ ಉಳಿಯಲಿದೆ. ಬಹಳ ಹಿಂದೆಯೇ ಈ ತೀರ್ಮಾನ ಮಾಡಬೇಕಿತ್ತು. ಈಗಲಾದರೂ ಈ ನಿರ್ಧಾರ ಮಾಡಲಾಗಿದೆ. ಇದನ್ನು ಸ್ವಾಗತಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿದ್ದಾರೆ.ಒಂದು ದೇಶ ಒಂದು ಚುನಾವಣೆಗೆ ಕೇಂದ್ರದಿಂದ ಒಪ್ಪಿಗೆ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ. ಮುಂದಿನ ಅಧಿವೇಶನದಲ್ಲಿ ಇದರ ಮಸೂದೆ ಮಂಡನೆ ಆಗಲಿದೆ. ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತ ಮಾಡುತ್ತೇವೆ. ಇದರಿಂದ ಕೋಟ್ಯಂತರ ಹಣ ಉಳಿತಾಯ ಆಗಲಿದೆ ಎಂದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್ವಿಪಕ್ಷಗಳು ಒಂದು ದೇಶ ಒಂದು ಚುನಾವಣೆ ವಿರೋಧ ಮಾಡುತ್ತಿವೆ. ವಿಪಕ್ಷಗಳಿಗೆ ಮೋದಿಯವರ ಭಯ ಇದೆ. ಮತ್ತೆ ಮೋದಿಯವರೇ ಗೆದ್ದು ಬರುತ್ತಾರೆ ಅಂತ ಭಯ. ಹೀಗಾಗಿ ವಿಪಕ್ಷಗಳು ವಿರೋಧ ಮಾಡುತ್ತಿವೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ






 Advertisement 




Sign in to your account
Username or Email Address


Password

 Remember Me


