ಬಾಗಲಕೋಟೆ: ಬದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜನರ ಬಳಿ ಅಹವಾಲು ಸ್ವೀಕರಿಸಿದರು. ಈ ವೇಳೆ ಕಾರ್ಯಕರ್ತನೊಬ್ಬ ಹಣೆತುಂಬಾ ಬಂಡಾರ ಬಳಿದುಕೊಂಡು ಬಂದಿದ್ದರು ಇದನ್ನು ಕಂಡ ಸಿದ್ದರಾಮಯ್ಯ ಏನಯ್ಯಾ ಬಂಡಾರ ಇಷ್ಟೊಂದು ಬಳ್ಕೊಂಡಿದ್ದೀಯಾ.? ಸ್ವಲ್ಪ ಹಾಕ್ಕೊಂಡ್ ಬಾ ಎಂದು ಹಾಸ್ಯ ಮಾಡಿದರು.ಇದೇ ವೇಳೆ ಸಾರಿಗೆ ನೌಕರರು ನಮ್ಮನ್ನು ಕಾಯಂಗೊಳಿಸಿ. ನೀವು ಮನಸ್ಸು ಮಾಡಿದರೆ ಆಗುತ್ತೆ ಎಂದು ಕೇಳಿದಾಗ, ಏಯ್ ಡೋಂಟ್ ಟಾಕ್ ಲೈಕ್ ದಟ್ ನಾನೇನು ಮುಖ್ಯಮಂತ್ರಿನ ಎಂದು ಗರಂ ಆದರು.ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಸಿದ್ದು, ಸಭೆಯಲ್ಲಿ ಅಧಿಕಾರಿಯೊಬ್ಬರು ಹೆಕ್ಟೇರ್ ಎಂದು ಹೇಳೋಕೆ ತಡಬಡಾಯಿಸಿದಾಗ, ಏಯ್ ಹೆಕ್ಟರ್ ಅಲ್ಲಾ, ಹೆಕ್ಟೇರ್. ಹೆಕ್ಟೇರ್ ಶಬ್ಧ ಸರಿಯಾಗಿ ಉಚ್ಛರಿಸಿ ಎಂದು ಹೇಳಿದರು.ಕ್ಷೇತ್ರದ ನಿಲುವಿಗಿ ಗ್ರಾಮದ ನಿವಾಸಿ ಲಕ್ಕವ್ವ ಗಾರವಾಡ ಪತಿ ಇತ್ತೀಚೆಗೆ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಇದುವರೆಗೂ ಪರಿಹಾರ ಬಾರದ ಹಿನ್ನೆಲೆಯಲ್ಲಿ ಮಹಿಳೆ ಇಂದು ಸಿದ್ದರಾಮಯ್ಯ ಭೇಟಿಗೆ ಬಂದಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಸರ್ಕಾರದಿಂದ ಸಿಗಬೇಕಾದ ಸೌಲಭ್ಯವನ್ನು ಆದಷ್ಟು ಬೇಗ ಕಲ್ಪಿಸೋದಾಗಿ ಮಹಿಳೆಗೆ ಭರವಸೆ ನೀಡಿ 50 ಸಾವಿರ ಹಣವನ್ನು ನೆರವು ನೀಡಿದರು.Sign in to your account
Username or Email Address


Password

 Remember Me


