ಮಂಗಳೂರು: ಪಾಗಲ್ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದು, ಕೊನೆಗೆ ತಾನೂ ಕೂಡ ಕತ್ತು ಕೊಯ್ದುಕೊಂಡಿರುವ ಘಟನೆ ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಗೆ ಹಿಂಭಾಗ ನಡೆದಿದೆ.ಶಕ್ತಿನಗರದ ನಿವಾಸಿ ಸುಶಾಂತ್ ಪ್ರೇಯಸಿಗೆ ಚಾಕು ಇರಿದು, ತಾನು ಕತ್ತು ಕೊಯ್ದುಕೊಂಡ ಪಾಗಲ್ ಪ್ರೇಮಿ. ಸುಶಾಂತ್ ಹೈಸ್ಕೂಲ್‍ನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದನು. ಬಗಲಂಬಿ ನಿವಾಸಿ ಯುವತಿಯೊಬ್ಬಳು ಹೈಸ್ಕೂಲ್ ಓದುವಾಗ ಪರಿಚಯವಾಗಿತ್ತು. ನಂತರ ಆಕೆ ಕಾಲೇಜು ಮೆಟ್ಟಿಲೇರಿದಾಗ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮೂರು ವರ್ಷ ಪರಸ್ಪರ ಪ್ರೀತಿಸಿ ಸುತ್ತಾಡಿದ್ದರು. ಆದರೆ ಎಂಬಿಎಗೆ ಬಂದ ಮೇಲೆ ಯುವತಿ ಸುಶಾಂತ್ ಪ್ರೀತಿಯನ್ನು ತಿರಸ್ಕರಿಸಿ ದೂರ ತಳ್ಳಿದ್ದಳು. ಇದರಿಂದ ಸಿಟ್ಟಿಗೆದ್ದ ಸುಶಾಂತ್ ಯುವತಿ ಕಾಲೇಜಿನಿಂದ ಮನೆಗೆ ಬರುವುದನ್ನೇ ಕಾದು ಕುಳಿತು ಆಕೆಯನ್ನು ಅಡ್ದಗಡ್ಡಿ ಕೊಲೆಗೆ ಯತ್ನಿಸಿದ್ದಾನೆ.ಈ ಭಯಾನಕ ಘಟನೆ ನಡೆಯುವಾಗ ಸುತ್ತಲೂ ತುಂಬಾ ಜನ ನಿಂತಿದ್ದರು. ಎಲ್ಲರೂ ನೋಡುತ್ತಿದ್ದಂತೆಯೇ ಯುವತಿಗೆ ಪದೇ ಪದೇ ಚಾಕುವಿನಿಂದ ಇರಿದಿದ್ದಾನೆ. ಯುವತಿ ಪ್ಲೀಸ್ ನನ್ನ ಬಿಟ್ಟು ಬಿಡು ಎಂದು ಅಂಗಲಾಚಿ ಬೇಡಿದರು ಸುಶಾಂತ್ ಬಿಡಲೇ ಇಲ್ಲ. ಬಳಿಕ ತಾನೂ ಕುತ್ತಿಗೆ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಇಷ್ಟೆಲ್ಲಾ ಆಗುತ್ತಿದ್ದರೂ ಅಲ್ಲಿದ್ದ ಜನ ಮಾತ್ರ ಎಲ್ಲವನ್ನೂ ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿದ್ದರು ವಿನಃ ತಡೆಯುವ ಪ್ರಯತ್ನ ಮಾಡಲಿಲ್ಲ.ಸುಮಾರು 10 ನಿಮಿಷ ಆಗಿತ್ತು. ಬಳಿಕ ಯಾರೋ ಸ್ಥಳದಲ್ಲಿದ್ದವರು ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದರು. ನಂತರ ಸ್ಥಳಕ್ಕೆ ಬಂದ ನರ್ಸ್ ಯುವಕ ಚಾಕು ಹಿಡಿದು ಬೆದರಿಸುತ್ತಿದ್ದರು ಮುಂದೆ ಹೋಗಿ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ. ಆಗ ಯುವಕ ಅಲ್ಲಿದ್ದವರನ್ನು ಚಾಕು ತೋರಿಸಿ ಹತ್ತಿರ ಬರುತ್ತಿದ್ದವರನ್ನು ಬೆದರಿಸುತ್ತಿದ್ದನು. ಕೊನೆಗೆ ಪ್ರೇಯಸಿಯ ಪಕ್ಕ ಹೋಗಿ ಆಕೆಯ ಮೇಲೆ ಮಲಗಿಕೊಂಡನು. ಆಗ ಸ್ಥಳದಲ್ಲಿದ್ದವರು ನರ್ಸ್ ಗೆ ಸಹಾಯ ಮಾಡಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.Sign in to your account
Username or Email Address


Password

 Remember Me


