ಬೆಂಗಳೂರು: ಮಗಳ ಮದುವೆ ನಿಲ್ಲಿಸಲು ಅಣ್ಣನನ್ನೆ ಕೊಲೆ ಮಾಡಿಸಿದ ತಂಗಿಯನ್ನು ಸೇರಿ ನಾಲ್ವರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.ರಾಜಶೇಖರ್ ಕೊಲೆಯಾದ ವ್ಯಕ್ತಿ. ರಾಜಶೇಖರ್ ಇದೇ 22ರಂದು ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಕೊಲೆಯಾಗಿದ್ದನು. ರಾಜಶೇಖರ್ ಸಹೋದರಿಯಾದ ಗೌರಮ್ಮ ಸುಪಾರಿ ಕೊಟ್ಟು ತನ್ನ ಅಣ್ಣನನ್ನೇ ಕೊಲೆ ಮಾಡಿಸಿದ್ದಾಳೆ.ರಾಜಶೇಖರ್ ತನ್ನ ತಂಗಿ ಗೌರಮ್ಮ ಮಗಳಿಗೆ ಮದುವೆ ಮಾಡಲು ಮುಂದಾಗಿದ್ದನು. ಆದರೆ ಇದು ಗೌರಮ್ಮಳಿಗೆ ಇಷ್ಟವಿರಲಿಲ್ಲ. ಈ ಮದುವೆಯನ್ನು ತಡೆಯುವ ಸಲುವಾಗಿ ಗೌರಮ್ಮ ತನ್ನ ಅಣ್ಣ ರಾಜಶೇಖರ್ ಕೊಲೆಗೆ ಮುಮ್ತಾಜ್, ಮುನ್ನ, ಆರ್ಜು, ಸಾಕೀಬ್ ಎಂಬವರಿಗೆ ಸುಪಾರಿ ಕೊಟ್ಟಿದ್ದಳು.ಗೌರಮ್ಮ ತನ್ನ ಅಣ್ಣ ಮಗಳಿಗೆ ನೋಡಿದ್ದ ವರನ ಮೇಲೆ ಸಂಶಯಗೊಂಡಿದ್ದಳು. ವರನ ಮೇಲಿನ ಅನುಮಾನದಿಂದ ಮದುವೆ ನಿಲ್ಲಿಸಲು ಪ್ಲಾನ್ ಮಾಡಿದ್ದಳು. ಹಾಗಾಗಿ 3 ಲಕ್ಷ ರೂ. ಸುಪಾರಿ ಕೊಟ್ಟು ರಾಜಶೇಖರ್‍ನನ್ನು ಕೊಲೆ ಮಾಡಿಸಿದ್ದಳು.ಗೌರಮ್ಮ ಮಗಳ ಮದುವೆಗೆ ಕೇವಲ ಎರಡು ದಿನವಷ್ಟೆ ಬಾಕಿಯಿತ್ತು. ಈ ವೇಳೆ ಗೌರಮ್ಮ ತನ್ನ ಅಣ್ಣನ ಕೊಲೆ ಮಾಡಿಸಿ ಮದುವೆ ನಿಲ್ಲಿಸಿದ್ದಾಳೆ. ಸದ್ಯ ಕೆಂಗೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.Sign in to your account
Username or Email Address


Password

 Remember Me


