ಬೆಂಗಳೂರು: ಮಾಲ್‍ಗಳಲ್ಲಿ, ಶಾಪ್‍ಗಳಲ್ಲಿ, ಜಿಮ್ ಸೆಂಟರ್ ನಲ್ಲಿ ಕನ್ನಡ ಹಾಡು ಹಾಕಿಲ್ಲ ಎಂದು ಕೆಲ ಕನ್ನಡಿಗರು ಜಗಳ ಮಾಡುವುದು ಕಾಮನ್. ಆದರೆ ಈಗ ಈ ಗಲಾಟೆ ಟ್ರೆಂಡು ಬಿಬಿಎಂಪಿ ಕಸದ ಗಾಡಿಗೆ ಶಿಫ್ಟ್ ಆಗಿದೆ.ಶ್ರೀನಗರದಲ್ಲಿ ಕಸದ ಗಾಡಿ ಡ್ರೈವರ್ ಇಡೀ ಊರಿಗೆ ಕೇಳುವಂತೆ ನಿತ್ಯ ಹಿಂದಿ ಹಾಡು ಹಾಕಿಕೊಂಡು ಕಸ ಸಂಗ್ರಹಣೆ ಮಾಡುವುದಕ್ಕೆ ಬರುತ್ತಿದ್ದನು. ಇವನ ಕಾಟ ತಾಳಲಾರದೇ ಕೆಲ ಕನ್ನಡಿಗರು ಹಿಂದಿ ಹಾಡು ಹಾಕಿದ್ದಕ್ಕೆ ಸರಿಯಾಗಿ ಬೆಂಡೆತ್ತಿದ್ದಾರೆ.ಅಷ್ಟೇ ಅಲ್ಲದೇ ಕಸದ ಗಾಡಿಯಲ್ಲಿ ಈಗ ಡಾ. ರಾಜ್‍ಕುಮಾರ್ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಹಾಕುವಂತೆ ಗಲಾಟೆ ಮಾಡಿದ್ದಾರೆ. ಕೊನೆಗೆ ಬೆದರಿದ ಡ್ರೈವರ್ ಕನ್ನಡ ಹಾಡನ್ನೇ ಹಾಕುತ್ತೇನೆ ಎಂದು ಹೇಳಿ ಹೋಗಿದ್ದಾನೆ.ಈ ವಿಡಿಯೋ ಈಗ ವೈರಲ್ ಆಗಿದೆ. ಕೆಲವರು ಈ ಸಿಲ್ಲಿ ಮ್ಯಾಟ್ರಿಗೆಲ್ಲ ಈ ರೀತಿ ಗಲಾಟೆ ಮಾಡಬೇಕಾ ಎಂದು ಹೇಳಿದರೆ, ಮತ್ತೆ ಕೆಲವರು ಸರಿಯಾಗೇ ಮಾಡಿದ್ದೀರಿ ಎಂದು ಬೆನ್ನು ತಟ್ಟಿದ್ದಾರೆ.Sign in to your account
Username or Email Address


Password

 Remember Me


