ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಕೆರೆ ಹೂಳೆತ್ತುವ ಕಾಯಕಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಲಿ ಕಾರ್ಮಿಕರ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದಾರೆ.ಉದ್ಯೋಗ ಖಾತ್ರಿ ಯೋಜನೆಯಡಿ ಆರುಂಡಿ ಗ್ರಾಮದ ಕೆರೆ ಹೂಳೆತ್ತುವ ಕೆಲಸ ನಡೆಯುತಿತ್ತು. ಈ ವೇಳೆ ಸ್ವತಃ ತಾವೇ ಮುಂದೆ ಬಂದು ಹಾರೆ ಕೋಲು ಹಿಡಿದು ಮಣ್ಣನ್ನು ತೆಗೆದು ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು.ಅಷ್ಟೇ ಅಲ್ಲದೆ ಯೋಗ ಮಾಡುವುದಕ್ಕಿಂತ 10 ನಿಮಿಷ ಕೂಲಿ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ಕೆಲಸ ಮಾಡುತ್ತ ತಮ್ಮ ಜೊತೆಗಿದ್ದವರಿಗೆ ಹೇಳಿದರು. ಸುಮಾರು ಒಂದು ಗಂಟೆಗಳ ಕಾಲ ಇತರೆ ಕೂಲಿ ಕಾರ್ಮಿಕರಂತೆ ಒಂದು ಕಡೆ ಹಾರೆಕೋಲಿನಿಂದ ಮಣ್ಣು ಬಗೆದು, ಇನ್ನೊಂದು ಕಡೆ ಚಲಕಿಯಿಂದ ಮಣ್ಣು ತೆಗೆದು ಹೂಳೆತ್ತೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.Sign in to your account
Username or Email Address


Password

 Remember Me


