ಬಾಗಲಕೋಟೆ: ಪಟ್ಟಣದ ಅಭಿವೃದ್ಧಿ ಕಾಮಗಾರಿ ಕೇವಲ ಕಾಂಗ್ರೆಸ್ ಸದಸ್ಯರ ವಾರ್ಡಿ ಗೆ ಮೀಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸದಸ್ಯರು ಇರುವ ವಾರ್ಡ್ ಗಳಿಗೆ ಮಾತ್ರ ಕಾಮಗಾರಿ ಹಂಚಿಕೆ ಮಾಡಿದ್ದರೆ ಎಂದು ಬಿಜೆಪಿ ಆರೋಪಿಸಿದೆ.ಕಾಂಗ್ರೆಸ್ಸಿಗರ ವಾರ್ಡ್ ನಲ್ಲಿ ಮಾತ್ರ ಅಭಿವೃದ್ಧಿ ನಮ್ಮ ವಾರ್ಡ್ ಗಳ ಬಗ್ಗೆ ಚಿಂತೆ ಮಾಡಿಲ್ಲ ಎಂದು ಬಾದಾಮಿಯ ಬಿಜೆಪಿ ಪುರಸಭೆ ಸದಸ್ಯರು ಹಾಗೂ ಸ್ಥಳೀಯರು ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.ಎಂ.ಕೆ.ಪಟ್ಟಣಶೆಟ್ಟಿ, ಮಹತೇಶ ಮಮದಾಪುರ ಅವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು. ಪುರಸಭೆಯ ಕಾಂಗ್ರೆಸ್ ಸದಸ್ಯರ ವಾರ್ಡ್ ಗೆ ಮಾತ್ರ ಅಭಿವೃದ್ಧಿ ಕಾರ್ಯಕ್ಕೆ ಸಿದ್ದರಾಮಯ್ಯ ಅಸ್ತು ಅಂದಿದ್ದಾರೆ. ಎಸ್.ಎಫ್.ಸಿ ಅನುದಾನದಲ್ಲಿ ಸಿದ್ದರಾಮಯ್ಯ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎನ್ನುವ ರೀತಿ ಬೇದಭಾವ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿಕಾರಿದರು.ನಗರದಲ್ಲಿ ಕಾಂಗ್ರೆಸ್ ಸದಸ್ಯರಿರುವ 13 ವಾರ್ಡ್ ಗಳಿಗೆ ಎರಡು ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಸಿಸಿ ರಸ್ತೆ, ರಸ್ತೆ ಡಾಂಬರೀಕರಣ, ಸಿಸಿ ಚರಂಡಿ, ಚರಂಡಿ ದುರಸ್ಥಿ ಸೇರಿದಂತೆ ವಿವಿಧ ಕಾಮಗಾರಿ ಮಾಡಲು ಅನುಮತಿ ನೀಡಿದ್ದಾರೆ. ಆದರೆ ಬಿಜೆಪಿ ಸದಸ್ಯರಾಗಿರುವ ವಾರ್ಡಿ ಗೆ ಕಾಮಗಾರಿ ಹಂಚಿಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರ ನಡೆಯನ್ನು ವಿರೋಧಿಸಿ, ಅವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.Sign in to your account
Username or Email Address


Password

 Remember Me


