ಬೆಂಗಳೂರು: ಕಳೆದ ಆರು ವರ್ಷದಲ್ಲಿ ಬಂಗಾರ ದಾಖಲೆ ಬರೆದಿದ್ದು, ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.ಇದು ಕಳೆದ 6 ವರ್ಷಗಳಲ್ಲೇ ಅತ್ಯಧಿಕ ಏರಿಕೆ ಕಂಡ ಬೆಲೆಯಾಗಿದೆ. ಕಳೆದ ತಿಂಗಳಿಗೂ, ಈ ತಿಂಗಳಿಗೂ ಚಿನ್ನದ ದರದ ವ್ಯತ್ಯಾಸ ನೋಡುವುದಾದರೆ, ಕಳೆದ ತಿಂಗಳು 22 ಕ್ಯಾರೆಟ್ ಚಿನ್ನದ ಬೆಲೆ-30,190 ರೂ. ಹಾಗೂ 24 ಕ್ಯಾರೆಟ್ ಚಿನ್ನದ ದರ – 33,290 ರೂ. ಇತ್ತು. ಇಂದು 22 ಕ್ಯಾರೆಟ್ ಚಿನ್ನದ ಬೆಲೆ – 31,980 ರೂ. ಹಾಗೂ 24 ಕ್ಯಾರೆಟ್ ಚಿನ್ನದ ದರ – 34,200 ರೂ.ಗೆ ಏರಿಕೆಯಾಗಿದೆ.ಒಂದು ತಿಂಗಳಲ್ಲಿ ಒಡವೆ ಚಿನ್ನ 10 ಗ್ರಾಂಗೆ 800 ರೂಪಾಯಿಯಷ್ಟು ಏರಿಕೆಯಾಗಿರೋದಕ್ಕೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ ಎಂದು ಚಿನ್ನದ ವ್ಯಾಪಾರಸ್ಥರು ಹೇಳುತ್ತಾರೆ. ಸದ್ಯ ಆಷಾಢ ಬಂದರೆ ಚಿನ್ನದ ಬೆಲೆ ಕಡಿಮೆಯಾಗುತ್ತೆ ಎನ್ನುವ ಮಾತು ಈ ಬಾರಿ ಸುಳ್ಳಾಗಿದೆ.ಬಂಗಾರದ ದರ ಬೆಲೆ ಹೆಚ್ಚಳಕ್ಕೆ ಕಾರಣವೆನೆಂದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುಎಸ್ ಹಾಗೂ ಇರಾನ್ ನಡುವಿನ ವ್ಯಾಪಾರ ಪೈಪೋಟಿಯಾಗಿದೆ. ಇತ್ತ ಸೆಂಟ್ರಲ್ ಬ್ಯಾಂಕ್ ಚಿನ್ನವನ್ನು ಭಾರೀ ಪ್ರಮಾಣದಲ್ಲಿ ಖರೀದಿಸುತ್ತಿರುವ ಪರಿಣಾಮ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.Sign in to your account
Username or Email Address


Password

 Remember Me


