ತುಮಕೂರು: ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮೊದಲ ಬಲಿಯಾಗಿದ್ದು, ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡಿದ್ದ ಯುವಕ ಇಂದು ಮೃತಪಟ್ಟಿದ್ದಾನೆ.ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಮೃತ ಯುವಕ. ಕುಮಾರ್ ಟಿಕ್‍ಟಾಕ್ ವಿಡಿಯೋ ಮಾಡುವಾಗ ಆಯ ತಪ್ಪಿ ತಲೆ ನೆಲಕ್ಕೆ ಬಿದ್ದಿದ್ದ. ಪರಿಣಾಮ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಇಂದು ಸಾವನ್ನಪ್ಪಿದ್ದಾನೆ.ಆಗಿದ್ದೇನು?:
ಜೂನ್ 15ರಂದು ಕುಮಾರ್ ಸ್ನೇಹಿತನ ಜೊತೆಯಲ್ಲಿ ಟಿಕ್‍ಟಾಕ್ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್, ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್ ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದ. ಬಿದ್ದ ರಭಸಕ್ಕೆ ತಲೆ ಮೂಳೆ ಮತ್ತು ಬೆನ್ನು ಮೂಳೆಗಳು ಮುರಿದಿತ್ತು. ತಕ್ಷಣವೇ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.https://youtu.be/NuuQgX-flcQಕುಮಾರ್ ರಾಮು ಮೆಲೋಡಿಸ್ ಆರ್ಕೇಸ್ಟ್ರಾದಲ್ಲಿ ಡ್ಯಾನ್ಸರ್ ಕಮ್ ಸಿಂಗರ್ ಆಗಿ ಕಳೆದ ಎಂಟು ವರ್ಷದಿಂದ ಕೆಲಸ ಮಾಡುತ್ತಿದ್ದ.ಇತ್ತೀಚೆಗೆ ಟಿಕ್‍ಟಾಕ್ ಹುಚ್ಚಿನಿಂದ ಅನೇಕ ದುರಂತಗಳು ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಟಿಕ್‍ಟಾಕ್ ಮಾಡುವಾಗ ಶೂಟ್ ಮಾಡಿಕೊಂಡು ಬಾಲಕನೊಬ್ಬ ಮೃತಪಟ್ಟಿದ್ದನು. ಟಿಕ್‍ಟಾಕ್ ಮಾಡೋದು ಬಿಟ್ಟು ಮಕ್ಕಳನ್ನು ನೋಡಿಕೋ ಎಂದು ಪತಿ ಬೈದಿದ್ದಕ್ಕೆ ಟಿಕ್‍ಟಾಕ್ ಮಾಡುತ್ತಲೇತಮಿಳುನಾಡಿನಗೃಹಿಣಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


