ಹಾಸನ: ಪ್ರವಾಸಕ್ಕೆಂದು ಬೆಂಗಳೂರಿನಿಂದ ಬಂದಿದ್ದ ನಾಲ್ವರು ಯುವಕರಲ್ಲಿ ಓರ್ವ ಯುವಕ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಘಟನೆ ಸಕಲೇಶಪುರ ತಾಲೂಕಿನ ಮೂಕನ ಮನೆ ಫಾಲ್ಸ್ ನಲ್ಲಿ ನಡೆದಿದೆ.ಬೆಂಗಳೂರಿನ ನಿವಾಸಿ ತನುಷ್ (23) ಮೃತ ದುರ್ದೈವಿ. ಬೆಂಗಳೂರಿನ ತಿಗಳರ ಪಾಳ್ಯದಿಂದ ತನುಷ್, ಪುರುಷೋತ್ತಮ್, ಮನೋಜ್ ಸೇರಿದಂತೆ ನಾಲ್ವರು ಕಳೆದ ಎರಡು ದಿನಗಳಿಂದ ಬೈಕ್‍ನಲ್ಲಿ ಪ್ರವಾಸ ಕೈಗೊಂಡಿದ್ದರು. ಮೊದಲು ಮಡೀಕೇರಿ ಪ್ರವಾಸ ಮುಗಿಸಿ ನಂತರ ಹಾಸನದ ಮೂಕನಮನೆ ಫಾಲ್ಸ್ ಗೆ ಬಂದಿದ್ದರು. ಆದರೆ ಫಾಲ್ಸ್ ನಲ್ಲಿ ಬಂಡೆಯಿಂದ ಹರಿಯುತ್ತಿದ್ದ ನೀರಿನ ಜೋತೆ ಸೆಲ್ಪಿ ತೆಗೆದುಕೊಳ್ಳುತ್ತಿರುವಾಗ ತನುಷ್ ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.ಈ ವೇಳೆ ಯುವಕನ ಜೊತೆ ಇದ್ದ ಸ್ನೇಹಿತರು ಆತನನ್ನು ಉಳಿಸಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ದುರಾದೃಷ್ಟವಶಾತ್ ಜಾಲಿ ಆಗಿ ಸ್ನೇಹಿತರೊಟ್ಟಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಸೆಲ್ಫಿ ಕ್ರೇಜ್‍ಗೆ ಸಾವನ್ನಪ್ಪಿದ್ದಾನೆ.ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದು, ಸದ್ಯ ಈ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


