ಬೆಂಗಳೂರು: ಐಎಂಎ ನಲ್ಲಿ ಹಣ ಹೂಡಿದವರ ಎಲ್ಲರದ್ದೂ ವಿಭಿನ್ನ ಕಥೆಗಳು. ಮಕ್ಕಳ ಶಾಲಾ ಫೀ, ಮಗಳ ಮದುವೆ, ತಂದೆಯ ಪಿಂಚಣಿ, ತಾಯಿಯಡ ಹಣ ಹೀಗೆ ಅಲ್ಪಾವಧಿಯಲ್ಲಿ ಹೆಚ್ಚು ಗಳಿಸಬಹುದೆಂಬ ಒಂದೇ ಒಂದು ಆಸೆಯಿಂದ ಕನಸನ್ನು ಐಎಂಎ ನಲ್ಲಿ ಹೂಡಿಕೆ ಮಾಡಿದ್ದರು. ತನ್ನ ಪತಿ ಐಎಂಎ ನಲ್ಲಿ 25 ಲಕ್ಷ ರೂ. ಹೂಡಿರುವ ವಿಷಯ ತಿಳಿದಿರುವ ಪತ್ನಿ ತವರು ಮನೆ ಸೇರಿಕೊಂಡಿದ್ದಾರೆ.ಬೆಂಗಳೂರಿನ ಅರಕೆರೆ ನಿವಾಸಿಯಾಗಿರೋ ಶಬ್ಬೀರ್ ಎಂಬವರು ತಮ್ಮ ಚಿಕ್ಕಮಗಳೂರಿನಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿ, ಕಳೆದ 6 ತಿಂಗಳ ಹಿಂದೆ ಐಎಂಎಗೆ ಬರೋಬ್ಬರಿ 25 ಲಕ್ಷ ಹೂಡಿಕೆ ಮಾಡಿದ್ದರು. ಈ ವಿಚಾರ ಪತ್ನಿಗೆ ಗೊತ್ತಿರಲಿಲ್ಲ. ಮೊದಲ ಮೂರು ತಿಂಗಳು ತಲಾ 50 ಸಾವಿರ ಲಾಭದ ಹಣ ಪಡೆದ ಶಬ್ಬೀರ್‍ಗೆ ನಂತರ ಒಂದು ನಯಾಪೈಸೆಯೂ ಬಂದಿಲ್ಲ. ಇದನ್ನೂ ಓದಿ:    ಐಎಂಎ ಬೆನ್ನಲ್ಲೇ ಮತ್ತೊಂದು ವಂಚನೆ ಪ್ರಕರಣ ಬಯಲುಯಾವಾಗ ಮನ್ಸೂರ್ ವಂಚನೆ ಬೆಳಕಿಗೆ ಬಂತೋ ಶಬ್ಬೀರ್ ಶಾಕ್ ಆಗಿದ್ದರು. ಕೊನೆಗೆ ಈ ವಿಚಾರ ಶಬ್ಬೀರ್ ಪತ್ನಿಗೂ ಗೊತ್ತಾಗಿದೆ. ನನ್ನ ಗಮನಕ್ಕೂ ತರದೆ ಇಷ್ಟೊಂದು ಮೊತ್ತದ ಹಣ ಹೇಗೆ ಹಾಕಿದೆ ಅಂತಾ ಗಲಾಟೆ ಮಾಡಿದ ಪತ್ನಿ, ರಾತ್ರಿ ಮುಗಿದು, ಬೆಳಗಾಗೋಷ್ಟರಲ್ಲಿ ಎರಡು ವರ್ಷದ ಮಗು ಜೊತೆ ಮನೆಬಿಟ್ಟು ಹೋಗಿದ್ದಾರೆ.  ಇದನ್ನೂ ಓದಿ: ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆಐಎಂಎ ಕಂಪನಿಯನ್ನು ನಂಬಿ 25 ಲಕ್ಷ ಹಣ ಹಾಕಿದ ತಪ್ಪಿಗೆ ಹಣದ ಜೊತೆಗೆ ಹೆಂಡ್ತಿ, ಮಗುವನ್ನು ಕಳೆದುಕೊಂಡು ಶಬ್ಬೀರ್ ಅನಾಥವಾಗಿದ್ದಾರೆ. ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಬಹುತೇಕರು ಜೀವಮಾನದ ಸಂಪಾದನೆಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


