ತುಮಕೂರು: ಪರಮೇಶ್ವರ್ ಹಟಾವೋ, ಕಾಂಗ್ರೆಸ್ ಬಚಾವೋ ಭಿತ್ತಿಪತ್ರ ಅಂಟಿಸಿದ್ದ ಪ್ರಕರಣದ ಸಂಬಂಧ ‘ಕೈ’ ಮುಖಂಡ ಕೆ.ಎನ್.ರಾಜಣ್ಣ ಅವರ ಪುತ್ರನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.ಕೆ.ಎನ್.ರಾಜಣ್ಣ ಅವರ ಪುತ್ರ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ, ಕಾಂಗ್ರೆಸ್‍ನ ಮಾಜಿ ಜಿಲ್ಲಾ ವಕ್ತಾರ ರಾಜೇಶ್ ದೊಡ್ಮನಿ, ಶಿವಪ್ರಸಾದ್ ಹಾಗೂ ರವಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.ರಾಜೇಂದ್ರ ಬೆಂಗಳೂರಿನಿಂದ ತುಮಕೂರಿಗೆ ಪರಮೇಶ್ವರ್ ಹಟಾವೋ, ಕಾಂಗ್ರೆಸ್ ಬಚಾವೋ ಭಿತ್ತಿಪತ್ರಗಳನ್ನು ಬಸ್ ಮೂಲಕ ಕಳಿಸಿದ್ದ. ಅವುಗಳನ್ನು ರಾಜೇಶ್ ದೊಡ್ಮನಿ ಸಹಾಯದಿಂದ ಶಿವಪ್ರಸಾದ್ ಹಾಗೂ ರವಿ ನಗರದ ವಿವಿಧೆಡೆ ಅಂಟಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.ಏನಿದು ಪ್ರಕರಣ?:
ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರು ಪರಾಭವಗೊಳ್ಳುತಿದ್ದಂತೆ ಚುನಾವಣೆಯ ಉಸ್ತುವಾರಿ ಹೊತ್ತ ಡಿಸಿಎಂ ಜಿ.ಪರಮೇಶ್ವರ್ ವಿರುದ್ಧದ ಕೂಗು ಕೇಳಿ ಬಂದಿತ್ತು. ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ ಎಂಬ ಪೋಸ್ಟರ್ ಅಂಟಿಸುವ ಮೂಲಕ ಕೈ ಕಾರ್ಯಕರ್ತರು ಜಿ.ಪರಮೇಶ್ವರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.ತುಮಕೂರಿನ ವಾಲ್ಮೀಕಿ ನಗರದ ಪ್ರವೇಶದ್ವಾರ ಬಳಿ `ಪರಮೇಶ್ವರ್ ಹಠಾವೋ ಎಂಬ ಕಾಂಗ್ರೆಸ್ ಬಚಾವೋ’ ಎಂಬ ಭಿತ್ತಿ ಪತ್ರ ಅಂಟಿಸಿ ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪೋಸ್ಟರ್ ಕೆಳಗಡೆ ನೊಂದ ಕಾಂಗ್ರೆಸ್ ಕಾರ್ಯಕರ್ತರು ಎಂದು ಒಕ್ಕಣಿಕೆ ಬರೆಯಲಾಗಿತ್ತು.ಈ ಸಂಬಂಧ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ರಾಮಕೃಷ್ಣ ಕೃತ್ಯ ಖಂಡಿಸಿ ಎನ್‍ಇಪಿಎಸ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೋಲಿಸರು ರಾಜೇಂದ್ರ ಅವರನ್ನು ವಿಚಾರಣೆಗೊಳಪಡಿಸಿದ್ದರು. ಆದರೆ ರಾಜೇಂದ್ರ ಅವರು ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಬಳಿಕ ತನಿಖೆ ಚುರುಗೊಳಿಸಿದ ಪೊಲೀಸರಿಗೆ ದೊರೆತ ಸೂಕ್ತ ಸಾಕ್ಷಿಗಳ ಆಧಾರದ ರಾಜೇಂದ್ರ ಸೇರಿ ಒಟ್ಟು ನಾಲ್ವರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


