ಬೆಂಗಳೂರು: ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸಲು ಚಾನ್ಸ್ ಕೊಡಿಸುತ್ತೇನೆ ಎಂದು ಕೆಲವರು ಮೋಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ನಟ ಮನೆ ಕಟ್ಟುವುದಕ್ಕೆ ಮೆಟೀರಿಯಲ್ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾನೆ.ಆಕರ್ಶ್ ಆದಿತ್ಯ ಬ್ಯುಸಿನೆಸ್ ಹೆಸರಲ್ಲಿ ವಂಚನೆ ಮಾಡಿರುವ ಕಿರುತರೆ ನಟ. ಈತ ‘ಮಮತೆಯ ಕರೆಯೋಲೆ’ ಸೇರಿ ಹಲವು ಧಾರವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾನೆ. ಆದರೆ ಇದೀಗ ಮನೆ ಕಟ್ಟುವುದಕ್ಕೆ ಮೆಟೀರಿಯಲ್ ಕೊಡಿಸುತ್ತೇನೆ ಎಂದು ಹೇಳಿ ಮೋಸ ಮಾಡಿದ್ದಾನೆ.ಆಕರ್ಶ್ ಆದಿತ್ಯ, ಮಹಿಳೆಯೊಬ್ಬಳ ಜೊತೆ ಪಾರ್ಟ್ನರ್‌ ಆಗಿ ನಂದಿನಿ ಲೇಔಟ್‍ನಲ್ಲಿ ವೋವ್ ಎಂಟರ್ಪ್ರೈಸ್ ನಡೆಸುತ್ತಿದ್ದರು. ವೋವ್ ಎಂಟರ್ಪ್ರೈಸ್ ಮೂಲಕ ಕಾಮಗಾರಿ ಮೆಟೀರಿಯಲ್ ಡೀಲ್ ಮಾಡಿಸುವ ಕೆಲಸ ಮಾಡಿಸುತ್ತಿರುತ್ತಾರೆ. ಬಿಲ್ಡರ್ಸ್ ಫಸ್ಟ್ ಕಂಪನಿಯ ಮಾಲೀಕ ವೈಭವ್ ಕುಮಾರ್ ಅಗರ್ವಾಲ್ ಕಡೆಯಿಂದ ಲಕ್ಷಾಂತರ ರೂಪಾಯಿಯ ಕಾಮಗಾರಿ ಮೇಟಿರಿಯಲ್ ಗಳನ್ನು ಕೊಡಿಸಿದ್ದಾನೆ. ಆದರೆ ಹಣ ಕೊಡದೆ ಮೋಸ ಮಾಡಿದ್ದಾನೆ.ಸುಮಾರು 5 ತಿಂಗಳ ಹಿಂದೆ ಮನೆ ಕಟ್ಟುವವರಿಗೆ ಮೆಟೀರಿಯಲ್ ಖರೀದಿ ಮಾಡಿಕೊಡಿಸಿದ್ದಾರೆ. ಆದರೆ ಹಣವನ್ನು ನಟನ ಬಳಿ ಕೇಳಿದಾಗ ಆತ ಉಡಾಫೆಯ ಉತ್ತರ ನೀಡುತ್ತಿದ್ದಾನೆ. ಇಬ್ಬರ ಫೋನ್ ಕೋಡ ಸ್ವಿಚ್ಛ್ ಆಫ್ ಆಗಿದೆ. ಅತ್ತ ಮನೆ ಮಾಲೀಕರ ಬಳಿ ಹಣ ಪಡೆದು ಮನೆ ಮೆಟೀರಿಯಲ್ ಡಿಸೈನ್ ಮಾಡಿಸದೆ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಅಗರ್ವಾಲ್ ಹೇಳಿದ್ದಾರೆ.ಸದ್ಯಕ್ಕೆ ಕಿರುತರೆ ನಟನ ಮತ್ತು ಜೊತೆಗಾರ್ತಿ ಮಹಿಳೆಯ ವಿರುದ್ಧ ಮಾಲೀಕ ಅಗರ್ವಾಲ್ ಪೀಣ್ಯ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ಕಿರುತರೆ ನಟನನ್ನು ಸಂಪರ್ಕ ಮಾಡಿದರೆ ಆತ ಕಥೆ ಹೇಳಿಕೊಂಡು ಕಾಲ ದೂಡುತ್ತಿದ್ದಾನೆಂದು ಅಗರ್ವಾಲ್ ಆರೋಪಿಸಿದ್ದಾರೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


