ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದ ಬಗ್ಗೆ ಆಡಿದ ಒಂದೇ ಒಂದು ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ತಲೆ ಕೆಡಿಸಿಕೊಂಡಿದೆ. ಸಿದ್ದರಾಮಯ್ಯ ಅವರ ಮಾತು ಮೈತ್ರಿ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ ಎನ್ನಲಾಗಿದೆ.ಜುಲೈ ನಂತರ ರಾಜ್ಯ ರಾಜಕಾರಣದಲ್ಲಿ ಮೆಗಾ ಯೂ ಟರ್ನ್ ಆಗಲಿದೆ. ಆ ಯೂ ಟರ್ನ್ ನಡೆದು ಬಿಟ್ಟರೆ ಸಾಂದರ್ಭಿಕ ದೋಸ್ತಿ ಖತಂ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೇನಿದ್ದರೂ ಒಂದು ತಿಂಗಳ ಆಟ, ಈ ಬಾರಿ ನಾನೇನೂ ಮಾಡಲು ಆಗಲ್ಲ. ಬಿಜೆಪಿಯಿಂದ ಸ್ಕ್ರೀನ್ ಪ್ಲೇ, ಡೈರೆಕ್ಷನ್ ಎಲ್ಲ ರೆಡಿಯಾಗಿದೆ. ನಮ್ಮ ಶಾಸಕರು ಕೆಲವರು ಕೈ ಕೊಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿದ್ದರಾಮಯ್ಯ ಹೇಳಿದ ಈ ಒಂದು ರಹಸ್ಯ ಕೇಳಿ ಹೈಕಮಾಂಡ್, ಆಪ್ತ ಬಳಗವೇ ದಂಗಾಗಿ ಬಿಟ್ಟಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಅಲ್ಲದೆ ಈ ಸಲ ನಮ್ಮ ಶಾಸಕರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ, ನಾನು ಅಸಹಾಯಕನಾಗಿದ್ದೇನೆ. ಸಂಸತ್ತಿನ ಅಧಿವೇಶನದ ಬಳಿಕ ಏನು ಬೇಕಾದರೂ ಆಗಬಹುದು. ಸರ್ಕಾರ ನೋ ಗ್ಯಾರಂಟಿ ಎಂದು ಸಿದ್ದರಾಮಯ್ಯ ಹೇಳಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಆಪ್ತ ಬಳಗಕ್ಕೆ ಈಗಾಗಲೇ ಹಿಂಟ್ ಕೊಟ್ಟಿದ್ದಾರೆ ಎನ್ನಲಾಗಿದೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


