ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಆರಂಭವಾದ ನಂತರ ಹೊಸ ವರಸೆ ಶುರುವಾಗಿದೆ. ಇಲ್ಲಿನ ಜನರು ಜೆಡಿಎಸ್‍ಗೆ ವೋಟ್ ಹಾಕಿದವರಾದರೆ ಅಂತಹವರಿಗೆ ಲೋನ್ ಕ್ಯಾನ್ಸಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಮಧುಗಿರಿ ತಾಲೂಕಿನ ಡಿಸಿಸಿ ಬ್ಯಾಂಕ್‍ನಲ್ಲಿ ಲೋನ್ ಬೇಕು ಎಂದು ಯಾರಾದರೂ ಹೋದರೆ ಅವರ ಪೂರ್ವಾಪರ ವಿಚಾರಿಸಲಾಗುತ್ತಿದೆಯಂತೆ. ಒಂದು ವೇಳೆ ಅವರು ಜೆಡಿಎಸ್‍ಗೆ ವೋಟ್ ಹಾಕಿದವರಾದರೆ ಅಂತಹವರಿಗೆ ಲೋನ್ ನೀಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಕಳೆದ ವಿಧಾಸಭಾ ಚುನಾವಣೆಯಲ್ಲಿ ತುಮಕೂರಿನ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಸೋಲಿನ ಪ್ರತಿಕಾರವನ್ನು ಮತದಾರರ ಮೇಲೆ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಮಧುಗಿರಿಯ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರಾಗಿರೋ ಕೆ.ಎನ್.ರಾಜಣ್ಣ ಜೆಡಿಎಸ್ ಬೆಂಬಲಿಸಿದವರಿಗೆ ಡಿಸಿಸಿ ಬ್ಯಾಂಕಲ್ಲಿ ಸಾಲ ಕೊಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.ಮಧುಗಿರಿ ತಾಲೂಕು ಗುಟ್ಟೆ ಗ್ರಾಮದ ಮಹಿಳಾ ಸಂಘದ ಸದಸ್ಯೆಯರಿಗೆ ಕೊಡಿಗೇನಹಳ್ಳಿಯ ಡಿಸಿಸಿ ಬ್ಯಾಂಕ್‍ನಲ್ಲಿ ಸಾಲ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬಳಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ರಾಜಣ್ಣ ಪತ್ನಿ ಶಾಂತಲಾ ಕೂಡ ನೀವು ನಮಗೆ ಬೆಂಬಲಿಸಿಲ್ಲ, ಜೆಡಿಎಸ್‍ಗೆ ಬೆಂಬಲಿಸಿದ್ದೀರಿ ಹೀಗಾಗಿ ನಿಮಗೆ ಸಾಲ ಕೊಡಲು ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ ಎಂದು ಮಹಿಳಾ ಸಂಘದ ಸದಸ್ಯೆಯರು ಆರೋಪಿಸಿದ್ದಾರೆ.ಮಧುಗಿರಿ ಕ್ಷೇತ್ರದಲ್ಲಿ ಯಾರೇ ಡಿಸಿಸಿ ಬ್ಯಾಂಕಲ್ಲಿ ಲೋನ್ ಕೇಳಲು ಹೋದರೂ ಮೊದಲು ಆ ವ್ಯಕ್ತಿಯ ಫೋಟೋವನ್ನು ವಾಟ್ಸಾಪ್ ಮೂಲಕ ಅಧ್ಯಕ್ಷ ರಾಜಣ್ಣ ಅವರಿಗೆ ಕಳುಹಿಸಬೇಕಂತೆ. ಆಗ ರಾಜಣ್ಣ ಆ ವ್ಯಕ್ತಿಯ ಪೂರ್ವಾಪರ ವಿಚಾರಿಸಿ, ಯಾವ ಬೂತ್ ಹಾಗೂ ಆ ಬೂತಲ್ಲಿ ಎಷ್ಟು ಮತ ತಮಗೆ ಬಂದಿದೆ ಎಂಬುದನ್ನು ತಾಳೆ ಹಾಕುತ್ತಾರೆ. ಬಳಿಕ ಆ ಊರಿನ ತಮ್ಮ ಮುಖಂಡರ ಬಳಿ ಚರ್ಚಿಸಿ ಬಳಿಕ ಲೋನ್ ಮಂಜೂರು ಮಾಡುತ್ತಿದ್ದಾರೆ. ಜೆಡಿಎಸ್‍ಗೆ ಮತ ಹಾಕಿದ್ದಾರೆ ಅನ್ನೋದು ಗೊತ್ತಾದರೆ ಅವರಿಗೆ ಲೋನ್ ಸಿಗಲ್ಲ. ಬಳಿಕ ಮನೆಗೆ ಕರೆಯಿಸಿಕೊಂಡು ನೀವು ಜೆಡಿಎಸ್ ಪರ ಕೆಲಸ ಮಾಡಿದ್ದೀರಾ? ಲೋನ್ ಕೋಡೊಕೆ ಮಾತ್ರ ನಾವು ಬೇಕಾ ಎಂದು ಅವಮಾನಿಸುತ್ತಾರೆ ಎನ್ನುವ ದೂರುಗಳು ಕೇಳಿ ಬಂದಿದೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


