ಹುಬ್ಬಳ್ಳಿ: ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ಈ ಹಿಂದೆಯೇ ಮಾಡಿದ್ದರು. ಈಗಲೂ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಿಂದ ನಮ್ಮ ಮೈತ್ರಿ ಸರ್ಕಾರಕ್ಕೆ ಲಾಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಾನು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಿಗೆ ದೂರು ನೀಡಿದ್ದೇನೆ ಎಂದು ಯಾರು ಹೇಳಿದರು. ನಾನು ರಾಹುಲ್‍ಗಾಂಧಿ ಅವರನ್ನ ಮಾತ್ರ ಭೇಟಿಯಾಗಿದ್ದು, ಅವರು ಯಾರಿಗೂ ಏನು ಹೇಳಿಲ್ಲ, ನಾನು ಏನು ಹೇಳಿಲ್ಲ ಎಂದ ಮೇಲೆ ನೀವೇ ಏಕೆ ದೇವೇಗೌಡರು ಈ ರೀತಿ ಹೇಳಿರಬಹುದು, ರಾಹುಲ್ ಗಾಂಧಿ ಹಾಗೇ ಹೇಳಿರಬಹುದು ಎಂದು ಊಹೇ ಮಾಡಿಕೊಳ್ಳುತ್ತಿರಾ. ಈ ಊಹೇ ಪತ್ರಿಕೋದ್ಯಮ ಒಳ್ಳೆಯದಲ್ಲ ಎಂದರು.ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಮಧ್ಯಂತರ ಚುನಾವಣಾ ಹೇಳಿಕೆಯ ಬಗ್ಗೆ ಕೇಳಿದಾಗ, ಅವರು ಅ ಹೇಳಿಕೆಗೆ ಆಗಲೇ ಸ್ಪಷ್ಟನೆ ನೀಡಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಮೈಸೂರ ಕ್ಷೇತ್ರ ನಮಗೆ ಬೇಕು ಅಂದಿದ್ದು ನಿಜ. ಆದರೆ ತುಮಕೂರು ಕ್ಷೇತ್ರವನ್ನು ಒತ್ತಾಯ ಪೂರ್ವಕ ಅವರಿಗೆ ಕೊಟ್ಟಿಲ್ಲ. ತುಮಕೂರು ಅವರು ಕೇಳಿದರು ಅದಕ್ಕೆ ಬಿಟ್ಟುಕೊಡಲಾಗಿತ್ತು ಎಂದು ತಿಳಿಸಿದರು.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


