ಚಿಕ್ಕಮಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಐಎಂಎ ಹಣಗರಣದ ಬೆನ್ನಲ್ಲೇ ಮತ್ತೊಂದು ವಂಚನೆ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.ಜನರಿಗೆ ಮೋಸ ಮಾಡಿ ಪರಾರಿಯಾಗುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮೂವರು ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದಾರೆ. ಹಣ ಕಳೆದುಕೊಂಡ ಜನರು ಕಣ್ಣೀರು ಹಾಕುತ್ತಾ ಆರೋಪಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.ಏನಿದು ಪ್ರಕರಣ?:
ನಗರದ ಬಾರ್ ಲೈನ್ ರಸ್ತೆಯಲ್ಲಿ 5 ಜನರು ಸೇರಿ ಐ ಕಾಯಿನ್ ಹಣಕಾಸು ಕಂಪನಿ ಆರಂಭಿಸಿದ್ದರು. ನಿಮ್ಮ ಹಣಕ್ಕೆ ಭಾರೀ ಪ್ರಮಾಣದಲ್ಲಿ ಬಡ್ಡಿ ನೀಡುತ್ತೇವೆ ಹಾಗೂ ಹಣವನ್ನು ಡಬಲ್ ಮಾಡಿಕೊಡುತ್ತೇನೆ ಎಂದು ನಂಬಿಸಿದ್ದಾರೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಹಾಸನದ ಬೇಲೂರು ತಾಲೂಕಿನ 2 ಸಾವಿರ ಜನರಿಂದ ಹಣ ಪಡೆದಿದ್ದಾರೆ.ಹಣ ಡಬಲ್ ಆಗುತ್ತದೆ ಎಂಬ ಆಸೆಯಿಂದ ಕೆಲವರು ಲಕ್ಷಾಂತರ ರೂ.ವನ್ನು ಐ ಕಾಯಿನ್ ಕಂಪನಿಗೆ ನೀಡಿದ್ದರು. ಬಹಳ ದಿನಗಳಿಂದ ಈ ರೀತಿಯ ವ್ಯವಹಾರ ನಡೆಯುತ್ತಿತ್ತು. ಹೀಗಾಗಿ ನಾನು ಕೂಡ 1.35 ಲಕ್ಷ ರೂ. ನೀಡಿದ್ದೆ. ನನಗೆ 35 ಸಾವಿರ ರೂ. ಮರಳಿಸಿದ್ದು, ಉಳಿದ ಹಣವನ್ನು ಹಾಗೇ ಇಟ್ಟುಕೊಂಡಿದ್ದರು. ಈಗ ನೋಡಿದರೆ ಮೋಸ ಮಾಡಿ ಪರಾರಿಯಾಗಿದ್ದಾರೆ ಎಂದು ರುಕ್ಷನಾ ಬಾನು ಅಳಲು ತೋಡಿಕೊಂಡಿದ್ದಾರೆ.ವಂಚನೆಗೆ ಒಳಗಾದ ನೂರಾರು ಜನರು ಐ ಕಾಯಿನ್ ಕಂಪನಿ ಮುಂದೆ ಸೇರಿದ್ದು, ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಮಗಳೂರು ಪೊಲೀಸರು, ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


