ಬೆಳಗಾವಿ: ಬಿಸಿಲ ಬೇಗೆಗೆ ಬೇಸತ್ತಿದ್ದ ಭುವಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಕೆಲವು ಗಂಟೆಗಳಿಂದ ಮಳೆ ಆಗುತ್ತಿದೆ.ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಮಳೆಯ ಅಬ್ಬರ ಜೊರಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ ಭಕ್ತರಿಗೆ ಮಳೆರಾಯ ತಂಪೆರೆದು ಹಿತ ನೀಡಿದ್ದಾನೆ. ಬಿಸಿಲ ಝಳಕ್ಕೆ ಕ್ಷೇತ್ರದಲ್ಲಿದ್ದ ಕೋಡಿಗಳಲ್ಲಿ ನೀರು ಕಡಿಮೆಯಾಗಿತ್ತು. ಆದರೆ ಮಳೆರಾಯನ ದೆಸೆಯಿಂದ ಸದ್ಯ ಕ್ಷೇತ್ರದಲ್ಲಿರುವ ಕೊಡಿಗಳು ತುಂಬಿ ಹರಿಯುತ್ತಿವೆ.ಮಳೆಯ ಹಿನ್ನೆಲೆ ದೇವಿಯ ದೇವಸ್ಥಾನದ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಲ್ಲದೆ ನೀರಿನ ಹರಿವು ಹೆಚ್ಚಾಗಿದ್ದಕ್ಕೆ ದೇವಸ್ಥಾನದ ಸುತ್ತಮುತ್ತ ಇದ್ದ ಅಂಗಡಿ ಮುಂಗಟ್ಟುಗಳಲ್ಲಿ ಭಕ್ತರು ನಿಂತಿದ್ದು, ಮಳೆಯ ಆಗಮನದಿಂದ ಭಕ್ತರ ಮೊಗದಲ್ಲಿ ನಗು ಮೂಡಿದೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


