ಚಿಕ್ಕಮಗಳೂರು: ಜಾಗವನ್ನ ಕ್ಲೀನ್ ಮಾಡಿಸೋಕೆ ಮನೆ ಮಾಲೀಕ ಜೆಸಿಬಿ ತಂದಿದ್ದಕ್ಕೆ ಬಾಡಿಗೆ ಇದ್ದವಳು ನನಗೆ ಅನ್ಯಾಯ ಆಗುತ್ತಿದೆ, ನಾನು ನನ್ನ ಮಗಳು ಸಾಯುತ್ತೇವೆ ಎಂದು 5 ವರ್ಷದ ಮಗುವಿನ ಕುತ್ತಿಗೆಗೆ ತಾಯಿಯೇ ಚಾಕು ಇರಿದಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿಕೊಪ್ಪದಲ್ಲಿ ನಡೆದಿದೆ.ಅನುಜೋಬಿ ಮಗಳಿಗೆ ಚಾಕು ಇರಿದ ತಾಯಿ. ಗ್ರಾಮದ ಸಯ್ಯದ್ ಶಫೀರ್ ಎಂಬವರ ಮನೆಯಲ್ಲಿ ಕೆಲ ವರ್ಷಗಳಿಂದ ಕೇರಳ ಮೂಲದ ಅನುಜೋಬಿ ವಾಸವಿದ್ದು, ಹೋಟೆಲ್ ನಡೆಸುತ್ತಿದ್ದಳು. ಬಾಡಿಗೆ ಸರಿಯಾಗಿ ನೀಡದ್ದಕ್ಕೆ ಮಾಲೀಕ ಖಾಲಿ ಮಾಡುವಂತೆ ಸೂಚಿಸಿದ್ದರು. ಅದಕ್ಕೆ ಕೋರ್ಟಿನಿಂದ ಇಂಜೆಕ್ಷನ್ ಆರ್ಡರ್ ಕೂಡ ತಂದಿದ್ದಳು. ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ಒಂದೂವರೆ ತಿಂಗ್ಳ ಕಂದಮ್ಮನನ್ನ ಕೊಂದ ತಂದೆಕೋರ್ಟ್ ಅದೊಂದು ಮಳಿಗೆಗೆ ಮಾತ್ರ ಇಂಜೆಕ್ಷನ್ ಆರ್ಡರ್ ನೀಡಿತ್ತು. ಮಾಲೀಕ ಸಯ್ಯದ್ ಶಫೀರ್ ತನ್ನ ಪಕ್ಕದ ಜಾಗದಲ್ಲಿದ್ದ ಗಿಡಗಂಟೆಯನ್ನ ಕ್ಲೀನ್ ಮಾಡಲು ಜೆಸಿಬಿ ತರಿಸಿದ್ದಾರೆ. ಇದನ್ನು ನೋಡಿ ಆಕೆ ಆಕ್ರೋಶಗೊಂಡು ಮಾಡಿಸಬೇಡಿ ಎಂದು ರಂಪಾಟ ಮಾಡಿದ್ದಾಳೆ. ನಂತರ ಸಯ್ಯದ್ ಶಫೀರ್ ಪೊಲೀಸರಿಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆಯೇ ಅನುಜೋಬಿ, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಐದು ವರ್ಷದ ಮಗುವಿನ ಕುತ್ತಿಗೆಗೆ ಇರಿದಿದ್ದಾಳೆ. ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಮಗುವಿನ ಕುತ್ತಿಗೆಗೆ ವೈದ್ಯರು ಮೂರು ಹೊಲಿಗೆ ಹಾಕಿದ್ದಾರೆ.ಬಾಡಿಗೆದಾರಳ ಕೂಗಾಟ, ಹಾರಾಟ, ರಂಪಾಟ ಕಂಡು ಪ್ರತಿ ವರ್ಷ ಕಂದಾಯ ಕಟ್ಟುವ ಮನೆ ಮಾಲೀಕ ಸಯ್ಯದ್ ಶಫೀರ್ ಕಂಗಾಲಾಗಿದ್ದರು. ಸದ್ಯಕ್ಕೆ ಅನುಜೋಬಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನದ ಬಳಿಕ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.Sign in to your account
Username or Email Address


Password

 Remember Me


