ಮೈಸೂರು: ನಿಮ್ಮ ಕೆಲಸದಿಂದ ಎದೆ ಒಡೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರು ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆಗಿದ್ದಾರೆ.  ಇದನ್ನೂ ಓದಿ: ಎಷ್ಟಾದರೂ ಖರ್ಚು ಮಾಡಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಿ- ಅಧಿಕಾರಿಗಳಿಗೆ ದೇಶಪಾಂಡೆ ಎಚ್ಚರಿಕೆಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಜಿಟಿಡಿ, ನಿಮ್ಮ ಕೆಲಸದಿಂದ ಎದೆ ಒಡೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಬೇರೆ ಎಲ್ಲಿಲ್ಲದ ರೋಗ ನಿಮಗೆ ನನ್ನ ಕ್ಷೇತ್ರದಲ್ಲೆ ಇದೆ ಸಭೆಯಲ್ಲಿಯೇ ತಲೆ ಚಚ್ಚಿಕೊಂಡಿದ್ದಾರೆ. ಅಲ್ಲದೆ ಇದೇ ವೇಳೆ ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗೆ ಜಿಟಿಡಿ ಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದಾರೆ. ಮೇ ವರೆಗೆ ಟ್ಯಾಂಕರ್ ಬಿಲ್ ಆಗಿದ್ಯಾ? ಅದನ್ನು ನೀನು ನನಗೆ ತೋರಿಸಿದ್ದೀಯಾ?. ನೀನು ಬಿಲ್ ಕ್ಲಿಯರ್ ಮಾಡದಿದ್ರೆ ಸಸ್ಪೆಂಡ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆಇಂದು ಮೈಸೂರಿನಲ್ಲೂ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಾದ ಆರ್.ವಿ ದೇಶಪಾಂಡೆ ಹಾಗೂ ಜಿ.ಟಿ ದೇವೇಗೌಡರು ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡರು. ಕುಡಿಯುವ ವಿಚಾರದಲ್ಲಿ ಜನರಿಗೆ ಸರಿಯಾಗಿ ನೀರು ತಲುಪಿಸುವ ವ್ಯವಸ್ಥೆ ಮಾಡಲಿಲ್ಲ ಎಂದರೆ ಅಮಾನತು ಮಾಡಿವೆ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಗೆ ಪ್ರವೇಶ ನಿರ್ಬಂಧಿಸಿದ್ದನ್ನು ಖಂಡಿಸಿ ರೈತರು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಸಚಿವರು ಬರುವಂತೆ ಪಟ್ಟು ಹಿಡಿದರು. ಇದನ್ನೂ ಓದಿ: ಬ್ರಿಮ್ಸ್​ನಲ್ಲಿ ಕೊಳಕು ಬೆಡ್, ಕೋಣೆಗಳು- ಅವ್ಯವಸ್ಥೆ ಕಂಡು ಸಚಿವರು ಕೆಂಡಾಮಂಡಲSign in to your account
Username or Email Address


Password

 Remember Me


