ಬೆಂಗಳೂರು: ಪ್ರತಿಯೊಂದು ಯಶಸ್ವಿ ಮಹಿಳೆ ಹಿಂದೆ ಒಬ್ಬ ಪುರಷ ಇರುತ್ತಾನೆ ಎಂದು ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರು ಹೇಳಿದ್ದಾರೆ.ಇಂದು ಕಿದ್ವಾಯಿ ಆಸ್ಪತ್ರೆಯ 5 ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಒಳ್ಳೆಯ ವೈದ್ಯನಿಂದ ಮಾತ್ರ ರೋಗಿ ಗುಣಪಡಿಸಲು ಸಾಧ್ಯ ಎಂದು ವೈದ್ಯರಿಗೆ ಕಿವಿ ಮಾತು ಹೇಳಿದರು.ನನಗೆ ಸರ್ಕಾರಿ ಆಸ್ಪತ್ರೆ ಮೇಲೆ ವಿಶೇಷ ಪ್ರೀತಿ ಇದೆ. ಏಕೆಂದರೆ ನನ್ನ ತಂದೆ ಕೂಡ ಒಬ್ಬ ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದರು. ವೈದ್ಯರ ಮೇಲೆ ಆಗ ಹಲ್ಲೆ ಎಲ್ಲಿಯೂ ಆಗುತ್ತಿರಲಿಲ್ಲ. ವೈದ್ಯರನ್ನು ದೇವರು ಎಂದು ಕಾಣುತ್ತಿದ್ದರು. ನಾನು ಇಂಟರ್‌ನೆಟ್ ನೋಡಲ್ಲ. ಅದು ಬರೀ ಮಾಹಿತಿ ನೀಡುತ್ತೆ ಅಷ್ಟೇ ಆದರೆ ನಾವು ವೈದ್ಯರ ಮೇಲೆ ವಿಶ್ವಾಸ ಇಡಬೇಕು. ಅದರಿಂದಲೇ ನಾವು ಆರೋಗ್ಯವಂತರಾಗಬಹುದು. ಒಬ್ಬ ಒಳ್ಳೆಯ ವೈದ್ಯನಿಂದ ಮಾತ್ರ ರೋಗಿ ಗುಣಪಡಿಸಲು ಸಾಧ್ಯ ಎಂದು ಹೇಳಿದರು.ಕಾರವಾರದಲ್ಲಿ ಒಂದು ರಸ್ತೆ ಸಮಸ್ಯೆ ಇತ್ತು ಅದನ್ನು ಸಿಎಂ ಅವರಿಗೆ ಹೇಳಿದ್ದೆ. ಅವರು ನಾವು ಸರಿ ಮಾಡ್ತೀವಿ ಅಮ್ಮ ಎಂದು ಹೇಳಿದ್ದರು. ಆದರೆ ನಮಗೆ ಸರ್ಕಾರದಿಂದ ಅನುಮತಿ ಕೊಟ್ಟರೆ ನಾವೇ ಅದನ್ನು ಸರಿ ಮಾಡುತ್ತೇವೆ. ನಮ್ಮ ಸಂಸ್ಥೆಯಿಂದ 400 ಕೋಟಿ ವರ್ಷಕ್ಕೆ ಖರ್ಚು ಮಾಡುತ್ತೇವೆ. ಅದರೊಳಗೆ ಈ ರಸ್ತೆ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಿದರು.ಈ ಎಲ್ಲಾ ಕೆಲಸಗಳಲ್ಲೂ ನನ್ನ ಜೊತೆ 7 ಜನ ಕೆಲಸ ಮಾಡುತ್ತಾರೆ. ನನಗೆ ಉತ್ತಮವಾದ ಸೆಕ್ಯೂರಿಟಿ ಮತ್ತು ಚಾಲಕರು ಇದ್ದಾರೆ ಮತ್ತು ನಾರಾಯಣಮೂರ್ತಿ ಅಂತಹ ಗಂಡ ನನ್ನ ಜತೆ ಇದ್ದಾರೆ. ಹೆಂಡತಿಯರ ಸಾಧನೆ ಹಿಂದೆ ಪತಿ ಇರುತ್ತಾರೆ “ಬಿಹೈಂಡ್ ದ ಸಕ್ಸಸ್ ಆಫ್ ವುಮೆನ್ ದೇರ್ ಇಸ್ ಎ ಅಂಡರ್‌ಸ್ಟಾಡಿಂಗ್ ಮೆನ್” ಎಂದು ಹೇಳಿದ್ದಾರೆ.ಇನ್ನೂ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಜಯದೇವ ಆಸ್ಪತ್ರೆ ಮುಖಸ್ಥ ಡಾ.ಮಂಜುನಾಥ್ ಉಪಸ್ಥಿತರಿದ್ದರು.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


