ಹುಬ್ಬಳ್ಳಿ: ಉಲ್ಟಾವಾಗಿ ಹಾಡು ಹೇಳುವ ಅಪರೂಪದ ಕಲೆಯನ್ನು ಕನ್ನಡತಿಯೊಬ್ಬಳು ಕರಗತ ಮಾಡಿಕೊಂಡಿದ್ದಾಳೆ. ಈ ಕನ್ನಡ ಪ್ರತಿಭೆ `ಬೊಂಬೆ ಹೇಳುತೈತೆ’ ಹಾಡನ್ನು ಉಲ್ಟಾ ಹಾಡಿ ಬೇಷ್ ಎನಿಸಿಕೊಂಡಿದ್ದಾಳೆ.ಹೌದು. ಹುಬ್ಬಳ್ಳಿಯ ತನುಶ್ರೀ ಮಸನಿ ವಿನೂತನವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಕನ್ನಡದ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅಭಿನಯದ `ರಾಜಕುಮಾರ’ ಚಿತ್ರದ `ಬೊಂಬೆ ಹೇಳುತೈತೆ’ ಹಾಡನ್ನು ತನುಶ್ರೀ ಮಸನಿ ಉಲ್ಟಾ ಹಾಡಿದ್ದಾರೆ.ಇದನ್ನು ಕೇಳಿದವರಿಗೆ ಇದು ಯಾವ ರೀತಿ ಕನ್ನಡ ಅನಿಸೋದು ಸಾಮಾನ್ಯ. ಹುಬ್ಬಳ್ಳಿ ಪತ್ರಕರ್ತನಗರ ನಿವಾಸಿಯಾದ ತನುಶ್ರೀ ಮಸನಿ ಉಲ್ಟಾ ಶೈಲಿಯಲ್ಲಿ ಮಾತನಾಡುವುದನ್ನು ಹಾಡುವುದನ್ನು ಮೈಗೂಡಿಸಿಕೊಂಡಿದ್ದಾಳೆ. ಆರಂಭದಲ್ಲಿ ಉಲ್ಟಾ ಮಾತಾನಾಡೋದನ್ನ ಮನರಂಜನೆ ಎಂದುಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಓದುವಾಗ, ಸ್ನೇಹಿತರ ಜೊತೆ ಮಾತನಾಡುವಾಗ ಇದನ್ನೇ ಮೈಗೂಡಿಸಿಕೊಂಡದ್ದಾಳೆ.ಸದ್ಯ ತನುಶ್ರೀ ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ತೆಲುಗು ಸೇರಿದಂತೆ ಅನೇಕ ಭಾಷೆಯ ಹಾಡುಗಳನ್ನು ಉಲ್ಟಾವಾಗಿ ಹೇಳುವ ಮೂಲಕ ಕೇಳುಗರಿಗೆ ಅಚ್ಚರಿ ಮೂಡಿಸಿದ್ದಾಳೆ. ಸುಮಾರು 10 ವರ್ಷಗಳಿಂದ ತನುಶ್ರೀ ಈ ಉಲ್ಟಾ ಭಾಷೆಯಲ್ಲಿ ಮಾತನಾಡುವ ಹವ್ಯಾಸವನ್ನು ರೂಢಿಕೊಂಡಿದ್ದಾಳೆ. ಮೊದ ಮೊದಲು ಮನೆಯ ಸದಸ್ಯರಿಗೆ ಈಕೆ ಹೀಗೆ ಮಾತನಾಡುವುದನ್ನು ಕೇಳಿ ನಿನಗೇನು ಹುಚ್ಚು ಹಿಡಿದಿದೆಯಾ ಎಂದು ಬೈದಿದ್ದು ಇದೆ. ಆದರೆ ಬಳಿಕ ಆಕೆಯ ಕಲೆಯನ್ನು ಅರಿತುಕೊಂಡ ಕುಟುಂಬದ ಸದಸ್ಯರು ಪ್ರೋತ್ಸಾಹ ನೀಡಿದ್ದಾರೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


