ಹಾಸನ: ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಎಂದು ಎಲ್ಲಾ ಹೇಳಿದರು. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡಿತ್ತೀವಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.ಜಿಲ್ಲೆಯಲ್ಲಿ ತಣ್ಣೀರುಹಳ್ಳದಲ್ಲಿರುವ ಚೆಸ್ಕಾಂ ಮುಖ್ಯ ಕಾರ್ಯಪಾಲನಾ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2006ರಲ್ಲಿ ನಮ್ಮ ಸರ್ಕಾರದಲ್ಲಿ ಗ್ಯಾಂಗ್ ಮ್ಯಾನ್ ಗಳನ್ನು ನೇಮಕ ಮಾಡಿದ್ದೇವು. ಆದರೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಸದೆ ಶೋಭಕ್ಕ ಸೇರಿ ಇವರೆಲ್ಲರೂ ರೇವಣ್ಣನ ಕಡೆಯವರು ಎಂದು ಲೈನ್‍ಮೆನ್ ನೇಮಕಾತಿಯನ್ನು ವಜಾ ಮಾಡಿದರು ಎಂದು ಆರೋಪಿಸಿದರು.2006ರಲ್ಲಿ ನಮ್ಮ ಸರ್ಕಾರದಲ್ಲಿ 450 ಚೆಸ್ಕಾಂ ಸಬ್ ಸ್ಟೇಷನ್ ಮಾಡಿದ್ದೆ. ಈಗ ಎಲ್ಲಾ ಆನ್ ಲೈನ್ ಗೀನ್ ಲೈನ್ ಅಂತಾರೆ ಆಗ ಯಾವುದೂ ಇರಲಿಲ್ಲ. ಈ ವಿಚಾರವಾಗಿ ಹಿಂದಿನ ಸರ್ಕಾರ ಏನು ಮಾಡಿದೆ ಎಂದು ಹೇಳಲಿ ನೋಡೋಣ. ಈ ಹಿಂದೆ ಕೆಇಬಿಗೆ 200 ಕೋಟಿ ಅನುದಾನ ಕೊಡಿಸಿದ್ದಕ್ಕೆ ನನಗೆ 10 ಕೋಟಿ ಲಂಚ ಕೊಡೋಕೆ ಬಂದಿದ್ದರು. ನಾನು ಲಂಚ ತೆಗೆದುಕೊಳ್ಳಲಿಲ್ಲಾ ಆದರ ಬದಲಾಗಿ ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ಬ್ಲಾಕ್ ಮಾಡಿ ಎಂದು ಮಾಡಿಸಿದ್ದೀನಿ ಎಂದು ತಿಳಿಸಿದರು.ಕಳೆದ 2006ರಲ್ಲಿ ನಾವು ಚನ್ನರಾಯಪಟ್ಟಣ, ಹೊಳೆನರಸೀಪುರಕ್ಕೆ 35 ಸಾವಿರ ಟ್ರಾನ್ಸ್ ಫಾರ್ಮರ್‍ ಗಳನ್ನು ತರಿಸಿದ್ದೇವು. ಸರ್ಕಾರ ಬಿದ್ದ ತಕ್ಷಣ ಎಲ್ಲಾ ಟ್ರಾನ್ಸ್ ಫಾರ್ಮರ್‍ ಗಳನ್ನು ತುಂಬಿಕೊಂಡು ಹೋಗಿದ್ದರು. ಈಗ ರೈತರು ಯಾರೆಲ್ಲ ಟ್ರಾನ್ಸ್ ಫಾರ್ಮರ್ ಕೇಳಿದರೆ ಎಲ್ಲರಿಗೂ ಕೊಡಿ ಎಂದು ಹೇಳಿದರು.ತುಮಕೂರಿಗೆ 25 ಟಿಎಂಸಿ ನೀರು ಮೊದಲು ನೀಡಿದ್ದು ನಾವು ಈಗ ಹೊಸ ಎಂಪಿ ಬಂದಿದ್ದಾರೆ ಹೇಗೆ ನೀರು ಕೊಡಿಸುತ್ತಾರೆ ನೋಡೋಣ. ಇಡೀ ರಾಜ್ಯದಲ್ಲಿ ನನ್ನ ಮೇಲೆ ತನಿಖೆ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದ ಏಕೈಕ ಪ್ರತಿನಿಧಿ ನಾನು, ಯಡಿಯೂರಪ್ಪ ಸರ್ಕಾರದಲ್ಲಿ ನನ್ನ ಮೇಲೆ ತನಿಖೆ ಮಾಡಿದರು. ನನ್ನ ಜೊತೆ ಕೆಲ ಒಳ್ಳೆಯ ಅಧಿಕಾರಿಗಳ ಮೇಲೆ ತನಿಖೆ ಮಾಡಿಸಿದರಿ ಎಂದು ಕಿಡಿಕಾರಿದರು.ಖಾಸಗಿಯವರ ಪೈಪೋಟಿ ಮೇಲೆ ನಾವು ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸುತ್ತಿದ್ದೇವೆ. ಈ ಬಾರಿ 1000 ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭ ಮಾಡಿದ್ದೇವೆ. ಕಳೆದ ಐದು ವರ್ಷದಲ್ಲಿ ಕೇಂದ್ರ ಸರ್ಕಾರ ಜನರಿಗೆ ಏನು ಮಾಡಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


