ಹಾಸನ: ಹೊಳೆನರಸೀಪುರ ಕ್ಷೇತ್ರದ ಮತದಾರನಿಗೆ ನಗುತ್ತಲೆ ಲೋಕೋಪಯೋಗಿ ಸಚಿವ ಕ್ಲಾಸ್ ತೆಗೆದುಕೊಂಡ ಘಟನೆ ಇಂದು ಹಾಸನದ ಕೆಪಿಟಿಎಲ್ ನ ಕಾರ್ಯ ಮತ್ತು ಪಾಲನಾ ವಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆದಿದೆ.ರೇವಣ್ಣ ಕಡೆಯವರು ಎಂದು ಹೇಳಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪ 450 ಜನ ಗ್ಯಾಂಗ್ ಮ್ಯಾನ್ ವಜಾ ಮಾಡಿದ್ದಾರೆ. ಈಗ ನೀವು ಶೋಭಾ ಕರಂದ್ಲಾಜೆ ಬಳಿ ಹೋಗಿ ಎಂದು ರೇವಣ್ಣ ನಗುತ್ತಲೇ ವ್ಯಕ್ತಿಯ ಕಾಲೆಳೆದರು. ಆ ಬಳಿಕ ಮಾರಗೋಡನಹಳ್ಳಿಯ ಇವನು, ವೋಟ್ ಯಾರಿಗೆ ಹಾಕಿದ್ದಾನೆ ಕೇಳಿ? ಎಂದು ಭಾಷಣದ ನಡುವೆ ಹೇಳಿದರು.ವೋಟ್ ಬಿಜೆಪಿಗೆ ಹಾಕುವವ ನನ್ನ ಬಳಿ ಬಂದು ಈಗ ಚೀಟಿ ಕೊಟ್ಟಿದ್ದಾನೆ. ಆದರೆ ನನಗೆ ಬಿಜೆಪಿ, ಕಾಂಗ್ರೆಸ್ ಸಂಬಂಧವಿಲ್ಲ. ಅವರು ಒಳ್ಳೆಯ ಅಧಿಕಾರಿ ಆಗಿದ್ದಾರೆ. ಎಲ್ಲರದ್ದು ಕೆಲಸ ಮಾಡಿಕೊಡುತ್ತೇನೆ. ಈ ಭಾಗದ ಜನರಿಗೆ ಬೇಕಾದ ಕೆಲಸ ಮಾಡಲು ಬಂದಿದ್ದು, ಎಲ್ಲರ ಕೆಲಸ ಮಾಡುತ್ತೇನೆ ಎಂದರು.ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಸಮ್ಮಿಶ್ರ ಸರ್ಕಾರ ಬಗ್ಗೆ ಪ್ರಸ್ತಾಪಿಸಿದ ಅವರು, ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಎಂದು ಎಲ್ಲಾ ಹೇಳಿದರು. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡಿತ್ತೀವಿ ಎಂದರು. ಆ ಮೂಲಕ ಸರ್ಕಾರ ಪತನದ ಕುರಿತು ಪರೋಕ್ಷವಾಗಿ ಸುಳಿವು ನೀಡಿದ್ರಾ ಎಂಬ ಚರ್ಚೆ ಕೂಡ ನಡೆದಿದೆ.[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]Sign in to your account
Username or Email Address


Password

 Remember Me


