ಚಿಕ್ಕಮಗಳೂರು: ಕುಡಿದ ಅಮಲಿನಲ್ಲೇ ಮದ್ಯಕ್ಕಾಗಿ ಪತಿ ಹಾಗೂ ಪತ್ನಿ ಬೀದಿಯಲ್ಲಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿ ನಡೆದಿದೆ.ಪತಿ ಹಾಗೂ ಪತಿ ಮೊದಲೇ ಮದ್ಯ ಸೇವನೆ ಮಾಡಿದ್ದರು. ಬಳಿಕ ಬಾಟಲಿಯಲ್ಲಿ ಉಳಿದ ಸುಮಾರು 90 ಎಣ್ಣೆಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ನಡು ಬೀದಿಯಲ್ಲೇ ರಂಪಾಟ ನಡೆಸಿದ್ದಾರೆ.ಅಲ್ಲದೆ ಬಾರ್ ಮುಂಭಾಗದಲ್ಲಿ ದಂಪತಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಬಳಿಕ ಪತಿ ತನಗೆ ಎಣ್ಣೆ ಕೊಡಿಸಲಿಲ್ಲ ಎಂದು ಸಿಟ್ಟಿಗೆದ್ದ ಪತ್ನಿ ನಡು ರಸ್ತೆಯಲ್ಲಿ ತನ್ನ ಪತಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಪತಿ-ಪತ್ನಿ ಸುಮಾರು ಅರ್ಧ ಗಂಟೆಗಳ ಕಾಲ ಪರಸ್ಪರ ಬಡಿದಾಡಿಕೊಂಡಿದ್ದಾರೆ.ದಂಪತಿಯ ಎಣ್ಣೆ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Sign in to your account
Username or Email Address


Password

 Remember Me


