ವಿಜಯಪುರ: ಕಂಟೇನರ್ ಲಾರಿ ಹಾಗೂ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪಿಕಪ್‍ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ನಡೆದಿದೆ.ಸುಭಾಷ್ ದೇವರ ನಾವದಗಿ (35), ಯಂಕಣ್ಣ ಕಲಾಲ್ (36) ಮತ್ತು ಮೋಹನ ಸೊಲಂಕಿ (45) ಮೃತ ದುರ್ದೈವಿಗಳು. ಮೃತರು ಸಿಂದಗಿ ಪಟ್ಟಣದ ಅಗಸಿ ಓಣಿ ನಿವಾಸಿಗಳು ಎಂದು ತಿಳಿದುಬಂದಿದೆ. ಮೃತರು ಪಿಕಪ್ ವಾಹನದಲ್ಲಿ ವಿಜಯಪುರಕ್ಕೆ ಬರುತ್ತಿದ್ದರು. ಆದರೆ ದೇವರಹಿಪ್ಪರಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ವೇಗವಾಗಿ ಬರುತ್ತಿದ್ದ ಕಂಟೇನರ್ ಲಾರಿ ಮತ್ತು ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿವೆ.ಪರಿಣಾಮ ಪಿಕಪ್ ವಾಹನದಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಪಿಕಪ್ ಮಾಲೀಕ ಅಬ್ಬಾಸ್‍ಗೆ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಘಟನೆ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Sign in to your account
Username or Email Address


Password

 Remember Me


