ಮಂಗಳೂರು: ರಸ್ತೆ ದಾಟುತ್ತಿದ್ದ ಹಾವನ್ನು ತಪ್ಪಿಸುವ ಯತ್ನದಲ್ಲಿದ್ದರೆ, ನಾಗರ ಹಾವು ಬಸ್ಸೊಳಗೆಯೇ ಹತ್ತಿ ಕುಳಿತ ಘಟನೆ ಮಂಗಳೂರಿನ ಮುಲ್ಕಿ ಬಳಿಯ ಕೊಳ್ನಾಡಿನಲ್ಲಿ ನಡೆದಿದೆ.ಹೌದು. ಖಾಸಗಿ ಬಸ್ ಉಡುಪಿಯಿಂದ ಹೈದರಾಬಾದ್ ತೆರಳುತ್ತಿತ್ತು. ಈ ವೇಳೆ ರಸ್ತೆಗೆ ಅಡ್ಡಲಾಗಿ ಹಾವು ಹರಿದಾಡುತ್ತಿತ್ತು. ಇದನ್ನು ಗಮನಿಸಿದ ಚಾಲಕ ಹಠಾತ್ತಾಗಿ ಬಸ್ ನಿಲ್ಲಿಸಿದ್ದಾರೆ. ಆದರೆ ಇದರಿಂದ ಗಾಬರಿಗೊಂಡ ಹಾವು ಬಸ್ಸಿನ ಮುಂಭಾಗದ ಸ್ಟೆಪ್ ಮೂಲಕ ಒಳಹೊಕ್ಕಿದ್ದು ಪ್ರಯಾಣಿಕರನ್ನು ಕೆಲಕಾಲ ಗಾಬರಿಗೊಳಿಸಿದೆ.ಬಳಿಕ ಹಾವು ನೇರವಾಗಿ ಡ್ರೈವರ್ ಕ್ಯಾಬಿನ್ ಒಳಗೆ ಸೇರಿದ್ದರಿಂದ ಪ್ರಯಾಣಿಕರು ಗಲಿಬಿಲಿಗೊಂಡು ಬಸ್ಸಿನಿಂದ ಇಳಿದಿದ್ದಾರೆ. ಬಸ್ಸನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ಬಳಿಕ ಸುರತ್ಕಲ್ ಬಳಿಯ ಸ್ನೇಕ್ ಕ್ಯಾಚರ್ ಸುಧಾಕರ್ ನನ್ನು ಕರೆಸಿ, ಹಾವನ್ನು ರಕ್ಷಣೆ ಮಾಡಲಾಯಿತು.ನಾಗರಹಾವು ಆಗಿದ್ದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಭಯಗೊಂಡಿದ್ದರು. ಹಾವನ್ನು ಹಿಡಿದು ಗೋಣಿಗೆ ತುಂಬಿಸಿದ ಬಳಿಕ ನಿರಾತಂಕವಾಗಿ ಬಸ್ ಮುಂದೆ ಸಾಗಿತ್ತು.Sign in to your account
Username or Email Address


Password

 Remember Me


