ಮೈಸೂರು: ಜೂನ್ 21 ರಂದು ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಮೈಸೂರಿನ ರೇಸ್ ಕೋರ್ಸ್ ನಲ್ಲಿ ಇಂದು ಮೆಗಾ ರಿಹರ್ಸಲ್ ನಡೆದಿದೆ.ಸುಮಾರು 5000ಕ್ಕೂ ಹೆಚ್ಚು ಯೋಗಪಟುಗಳಿಂದ ಸಾಮೂಹಿಕ ಯೋಗಾಭ್ಯಾಸ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಾಲತಾ ಜಗನ್ನಾಥ್, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.ಇದೇ ವೇಳೆ ಜಿ.ಟಿ. ದೇವೇಗೌಡರು ಹೆಚ್ಚು ಗಮನ ಸೆಳೆದರು. ಕಾರಣ ಪ್ಯಾಂಟ್, ಶರ್ಟ್ ನಲ್ಲಿ ಜಿ.ಟಿ ದೇವೇಗೌಡರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿ.ಟಿ. ದೇವೇಗೌಡರು ಬಿಳಿ ಪಂಚೆ, ಬಿಳಿ ಶರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇಂದು ಅಪರೂಪಕ್ಕೆ ಸಚಿವರು ಕಂದು ಬಣ್ಣದ ಪ್ಯಾಂಟ್, ತಿಳಿ ಬೂದು ಬಣ್ಣದ ಶರ್ಟ್ ತೊಟ್ಟು ಯೋಗ ತಾಲೀಮಿಗೆ ಬಂದಿದ್ದಾರೆ. ಅವರ ಉಡುಪು ಎಲ್ಲರ ಗಮನಸೆಳೆಯಿತು.ರೇಸ್ ಕೋರ್ಸ್ ನಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಸಾಮೂಹಿಕವಾಗಿ ಯೋಗಪಟುಗಳು ಯೋಗ್ಯಾಭ್ಯಾಸ ಮಾಡಿದ್ದಾರೆ. ಸಚಿವ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಯೋಗ ಪಟುಗಳು ಜೊತೆ ಸೇರಿ ತಾವೂ ಯೋಗಾಭ್ಯಾಸ ಮಾಡಿದ್ದಾರೆ.Sign in to your account
Username or Email Address


Password

 Remember Me


