ಚಿಕ್ಕಬಳ್ಳಾಪುರ: ಪಕ್ಷದಲ್ಲಿ ಯಾರು ಅಸಮಾಧಾನವಾಗಿದ್ದಾರೆ ಅವರಿಗೆ ಇನ್ನೊಂದು ಹಂತದಲ್ಲಿ ಮಂತ್ರಿ ಸ್ಥಾನ ಕೊಡುವ ನಿರ್ಧಾರವನ್ನು ಹೈಕಮಾಂಡ್ ಮಾಡಿದೆ. ನಾವೆಲ್ಲರೂ ರಾಜೀನಾಮೆ ನೀಡಲು ಒಪ್ಪಿಗೆ ನೀಡಿದ್ದು, ಸಿದ್ಧರಾಗಿದ್ದೇವೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ರಾಜೀನಾಮೆ ಕೊಡುವ ಮುನ್ಸೂಚನೆ ನೀಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿಕೊಡಬೇಕು ಎಂದು ಈಗಾಗಲೇ ತೀರ್ಮಾನವನ್ನೂ ಮಾಡಲಾಗಿದ್ದು, ಅವಧಿ ನಿಗದಿಪಡಿಸಲಾಗಿದೆ. ಅವಧಿ ಮುಗಿದ ಬಳಿಕ ಪರ್ಯಾಯವಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಪಕ್ಷದ ಮಟ್ಟದಲ್ಲಿ ತೀರ್ಮಾನ ಆಗಿದೆ ಎಂದರು.ಮೈತ್ರಿ ಪಾಲನೆಯಲ್ಲಿ ಕೆಲವೊಂದು ತೊಂದರೆಗಳು ಆಗಿವೆ. ಆದರೆ ಬಿಜೆಪಿಯೆಂಬ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ದೃಷ್ಟಿಯಿಂದ ಇಂದು ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಕೆಲವು ತೊಂದರೆಗಳಾಗಿವೆ. ಅವುಗಳನ್ನು ಸಹಿಸಿಕೊಂಡು ಮುಂದೆ ನಡೆಯಬೇಕಾಗಿದೆ ಎಂದು ತಿಳಿಸಿದರು.ಇದೇ ವೇಳೆ ಶಾಸಕ ಬಿಸಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾಟೀಲ್ ಸಚಿವರಾಗಬೇಕಿತ್ತು. ಆ ಭಾಗದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಹತಾಶ ಮನೋಭಾವದಿಂದ ಹೇಳಿದ್ದಾರೆ ಅಂದ್ರು.Sign in to your account
Username or Email Address


Password

 Remember Me


