ಬೆಂಗಳೂರು: ಊಟ ಮಾಡಲೆಂದು ಡಾಬಾಗೆ ಹೋಗಲು ರಸ್ತೆ ದಾಟುತ್ತಿದ್ದವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ರೈತರಿಬ್ಬರು ಮೃತಪಟ್ಟಿರುವ ಘಟನೆ ಹೊಸಕೋಟೆಯ ಸುಲ್ತಾನ್ ಡಾಬಾ ಬಳಿ ನಡೆದಿದೆ.ನರಸಾಪುರದ ದಿನ್ನೆ ಹೊಸಹಳ್ಳಿಯ ಮುನೇಗೌಡ (35) ರಾಜಪ್ಪ(36) ಮೃತ ದುರ್ದೈವಿಗಳು. ರೈತರಿಬ್ಬರು ಟೆಂಪೋದಲ್ಲಿ ಟೊಮೆಟೋ ತುಂಬಿಕೊಂಡು ಬಂದಿದ್ದರು. ನಂತರ ಊಟಕ್ಕಾಗಿ ಹೊಸಕೋಟೆಯ ಸುಲ್ತಾನ್ ಡಾಬಾ ಬಳಿ ಟೆಂಪೋ ನಿಲ್ಲಿಸಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಇನೋವಾ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಡಿಕ್ಕಿಯ ನಂತರ ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದನು. ಈ ವೇಳೆ ಅಂಬುಲೆನ್ಸ್ ಡ್ರೈವರ್ ಕಾರನ್ನು ಚೇಸ್ ಮಾಡಿದರೂ ಚಾಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸದ್ಯಕ್ಕೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂವಿಜಿ ಆಸ್ಪತ್ರೆಗೆ ರವಾನಿಸಿದ್ದಾರೆ.ಮೃತ ಇಬ್ಬರು ರೈತರಿಗೂ ಒಂದು ಹೆಣ್ಣು, ಗಂಡು ಮಗುವಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


