ಬೆಂಗಳೂರು: ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರವಾಹಿಯ ನಟ ವಿಜಯ್ ಸೂರ್ಯ ಸೀರಿಯಲ್‍ನಿಂದ ಹೊರಬಂದಿದ್ದಾರೆ. ಹೀಗಾಗಿ ನಟಿ ವೈಷ್ಣವಿ ಸಹನಟನನ್ನು ನೆನೆದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿ ಶುಭಕೋರಿದ್ದಾರೆ.ಹೌದು. ಧಾರವಾಹಿಯಿಂದ ಹೊರಬಂದಿರುವ ವಿಜಯ್‍ರನ್ನು ವೈಷ್ಣವಿ ಅವರು ನೆನದು `ನಿನ್ನನ್ನು ಮಿಸ್ ಮಾಡುತ್ತೇವೆ. ನಿನ್ನ ಭವಿಷ್ಯ ಚೆನ್ನಾಗಿರಲಿ’ ಎಂದು ಬರೆದು ಅವರಿಬ್ಬರ ಫೋಟೋ ಹಾಕಿ ಶುಭಕೋರಿದ್ದಾರೆ.ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧರಾಗಿದ್ದು, ಅವರು ಅಲ್ಲಿಗೆ ಹೊರಟ ನಂತರ ಅವರ ಪಾತ್ರ ಕೊನೆಯಾಗಲಿದೆ.ಈ ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಈಗ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬಂದಿದ್ದಾರೆ. ವಿಜಯ್ ಈಗ ಬ್ರೇಕ್ ಬೇಕಾಗಿರುವ ಕಾರಣ ಅವರು ಧಾರಾವಾಹಿಯಿಂದ ಹೊರ ನಡೆಯಲು ಇದೇ ಸಮಯ ಉತ್ತಮ ಎಂದು ಹೊರ ನಡೆದಿದ್ದಾರೆ.ಫೆಬ್ರವರಿ ತಿಂಗಳಿನಲ್ಲಿ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅವರು ತಮ್ಮ ಕುಟುಂಬದ ಜೊತೆ ಸ್ವಲ್ಪ ಕಾಲ ಕಳೆಯಬೇಕು ಎಂದು ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಜಯ್ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಈಗ ಅವರು ಲಕ್ನೋ ಟು ಮುಂಬೈ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.https://www.instagram.com/p/BypA2ahhxgm/Sign in to your account
Username or Email Address


Password

 Remember Me


