ಕಲಬುರಗಿ: ಜಮೀನಿಗಾಗಿ ದಾಯಾದಿಗಳ ನಡುವೆ ನಡೆದ ಕಲಹ ಮೂವರ ಬರ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.ಜಿಲ್ಲೆಯ ಸೇಡಂ ತಾಲೂಕಿನ ಮೆದಕ್ ಗ್ರಾಮದ ಮಲ್ಕಪ್ಪ ಹಾಗೂ ಆತನ ಇಬ್ಬರು ಮಕ್ಕಳಾದ ಚಿನ್ನಯ್ಯ ಮತ್ತು ಶಂಕ್ರಪ್ಪ ಎಂಬುವವರನ್ನು ಕೊಡಲಿಯಿಂದ ಹೊಡೆದು ಅವರ ಜಮೀನಿನಲ್ಲೇ ಕೊಲೆ ಮಾಡಲಾಗಿದೆ.ಮಲ್ಕಪ್ಪ ಸಹೋದರರಾದ ಆಶಪ್ಪ ಹಾಗೂ ಶರಣಪ್ಪ ಅವರ ಮಧ್ಯೆ ಜಮೀನಿನ ವಿಚಾರದಲ್ಲಿ ಜಗಳ ನಡೆಯುತಿತ್ತು. ಅದ್ದರಿಂದ ಆಶಪ್ಪ ಹಾಗು ಶರಣಪ್ಪ ತಮ್ಮ ಕುಟುಂದವರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.ಈ ಸಂಬಂಧ ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


