ಬೆಳಗಾವಿ: ಮಗು ಜಾಸ್ತಿ ಅಳುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬಳು ಚಮಚದಿಂದ ಮೂರು ವರ್ಷದ ಮುಗುವಿಗೆ ಬರೆ ಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಜಿಲ್ಲೆಯ ಗೋಕಾಕ್ ಪಟ್ಟಣದ ಮಲ್ದಾರ್ ಗ್ರಾಮದ ಅಂಗನವಾಡಿಯ ಶಿಕ್ಷಕಿ ರೇಣುಕಾ ಬರೆ ಹಾಕಿದ ಶಿಕ್ಷಕಿ. ಬಾಲಕ ಮೊಹಮ್ಮದ್ ಕಬೀರ್ ಅಂಗನವಾಡಿಯಲ್ಲಿ ಜೋರಾಗಿ ಅಳುತ್ತಿದ್ದ. ಈತನನ್ನು ಹೆದರಿಸುವ ಉದ್ದೇಶದಿಂದ ಚಮಚವನ್ನು ಬಿಸಿ ಮಾಡಿ ಕೈಗೆ ಬರೆ ಹಾಕಿದ್ದಾಳೆ.ಮಧ್ಯಾಹ್ನ ಮನೆಗೆ ಬಂದ ಮಗುವಿನ ಕೈ ಗಮನಿಸಿದ ಪೋಷಕರು ಗಾಬರಿಗೊಂಡು ಕೂಡಲೇ ಅಂಗನವಾಡಿಗೆ ಬಂದು ವಿಚಾರಿಸಿದಾಗ ಶಿಕ್ಷಕಿ ರೇಣುಕಾ ಕೃತ್ಯ ಬೆಳಕಿಗೆ ಬಂದಿದೆ. ನಂತರ ಮಗುವಿನ ಕೈಗೆ ತೀವ್ರ ಗಾಯವಾಗಿದ್ದರಿಂದ ಕೂಡಲೇ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಿದ್ದಾರೆ.ಶಿಕ್ಷಕಿ ರೇಣುಕಾಳ ಕೃತ್ಯಕ್ಕೆ ಪೋಷಕರು ಆಕ್ರೋಶಗೊಂಡಿದ್ದು ಇತ್ತ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


