ಯಾರೇ ಹೀರೋಗಳ ಹುಟ್ಟುಹಬ್ಬಕ್ಕಾದರೂ ಅಭಿಮಾನಿಗಳು ಸದಾ ಕಾದು ಕೂತಿರುತ್ತಾರೆ. ಅದು ತಮ್ಮ ನೆಚ್ಚಿನ ನಟರನ್ನು ಭೇಟಿಯಾಗಲು ಇರೋ ಸದಾವಕಾಶ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳೂ ಕೂಡಾ ಇದಕ್ಕೆ ಹೊರತಾಗಿಲ್ಲ. ಜುಲೈ 12ರಂದು ಶಿವಣ್ಣನ ಬರ್ತ್ ಡೇ ಇರೋದರಿಂದ ಅಭಿಮಾನಿಗಳೆಲ್ಲ ಪ್ಲ್ಯಾನಿಂಗ್ ಶುರು ಹಚ್ಚಿಕೊಂಡಿದ್ದಾರೆ. ಆದರೆ ಆ ಉತ್ಸಾಹದಿಂದಿರೋ ಅಭಿಮಾನಿಗಳಿಗೆಲ್ಲ ನಿರಾಸೆಯಾಗುವಂಥಾ ಸುದ್ದಿಯೀಗ ಹೊರಬಿದ್ದಿದೆ.ಈ ಬಾರಿ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಹ ವಾತಾವರಣವಿಲ್ಲ. ಅದಕ್ಕೆ ಕಾರಣವಾಗಿರೋದು ಅವರನ್ನು ಬಹು ಕಾಲದಿಂದ ಬಾಧಿಸುತ್ತಿರುವ ಭುಜದ ನೋವು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಶಿವಣ್ಣ ಈ ಚಿಕಿತ್ಸೆ ಪಡೆಯುತ್ತಿರೋದು ಲಂಡನ್‍ನಲ್ಲಿ. ಈ ಸಂಬಂಧವಾಗಿ ಅವರು ಜುಲೈ 6ರಂದು ಲಂಡನ್‍ಗೆ ತೆರಳಲಿದ್ದಾರೆ. ಆ ಬಳಿಕ ಇಪ್ಪತ್ತು ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತದೆ.ಈ ಕಾರಣದಿಂದ ಈ ಬಾರಿ ಶಿವಣ್ಣ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇದೇ ತಿಂಗಳ ಇಪ್ಪತ್ತನೇ ತಾರೀಕಿನಿಂದ ಭಜರಂಗಿ 2 ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ. ಈ ಹಿಂದೆ ಭಜರಂಗಿ ಚಿತ್ರದ ಮೂಲಕ ನಿರ್ದೇಶಕ ಎ.ಹರ್ಷ ಮತ್ತು ಶಿವಣ್ಣನ ಕಾಂಬಿನೇಷನ್ ಮೋಡಿ ಮಾಡಿತ್ತು. ಇದೀಗ ಭಜರಂಗಿ 2 ಮೂಲಕ ಈ ಜೋಡಿ ಮತ್ತೆ ಒಂದಾಗಿದೆ. ಈ ಚಿತ್ರದಲ್ಲಿ ಟಗರು ನಂತರ ಜಾಕಿ ಭಾವನಾ ಮತ್ತೊಮ್ಮೆ ಶಿವಣ್ಣನಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.ಈ ತಿಂಗಳ ಇಪ್ಪತ್ತರಿಂದ ಒಂದಷ್ಟು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿರೋ ಶಿವರಾಜ್ ಕುಮಾರ್ ಅವರು ಆ ನಂತರ ಚಿಕಿತ್ಸೆಗೆ ತೆರಳಲಿದ್ದಾರಂತೆ. ಇದು ನಿಜಕ್ಕೂ ಶಿವಣ್ಣ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ. ಆದರೂ ಅದಕ್ಕೆ ಆರೋಗ್ಯ ಸಂಬಂಧಿ ಸಮಸ್ಯೆ ಕಾರಣವಾಗಿರೋದರಿಂದ ಅಭಿಮಾನಿ ಬಳಗ ಬೇಸರಿಸಿಕೊಳ್ಳಲಾರದು.






 Advertisement 




Sign in to your account
Username or Email Address


Password

 Remember Me


