ಬೆಂಗಳೂರು: ಸಂಪುಟ ವಿಸ್ತರಣೆ ಬುಧವಾರದಿಂದ ಶುಕ್ರವಾರಕ್ಕೆ ಶಿಫ್ಟ್ ಆಗಿದ್ದು, ಇದೀಗ ಈ ಶಿಫ್ಟ್ ಗೆ ಟ್ವಿಸ್ಟ್ ಸಿಕ್ಕಿರುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಹೌದು. ಸಂಪುಟ ವಿಸ್ತರಣೆ ದಿಢೀರ್ ಬುಧವಾರದಿಂದ ಶುಕ್ರವಾರಕ್ಕೆ ಶಿಫ್ಟ್ ಆಗಿದೆ. ಇದಕ್ಕೆ ಕಾರಣ ರೇವಣ್ಣ ಅವರ `ನಕ್ಷತ್ರ’ ಪ್ರೀತಿ ಎಂದು ಹೇಳಲಾಗುತ್ತಿದೆ.ಬುಧವಾರ ಅಷ್ಟ ನಕ್ಷತ್ರವಿರೋದ್ರಿಂದ ಒಳ್ಳೆಯ ದಿನವಲ್ಲ. ಮೊದಲೇ ಸರ್ಕಾರಕ್ಕೆ ಅತೃಪ್ತರ ಕಾಟವಿದೆ. ಆ ದಿನ ವಿಸ್ತರಣೆಗೆ ಮುಂದಾದರೆ ಅತೃಪ್ತರು ಇನ್ನಷ್ಟು ಆಕ್ರೋಶಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ ಅಪತ್ತು ಬರುತ್ತದೆ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.ಆದರೆ ಶುಭ ಶುಕ್ರವಾರ ಸ್ವಾತಿ ನಕ್ಷತ್ರವಂತೆ. ಮೊದಲೇ ರೇವಣ್ಣನವರದ್ದು ಸ್ವಾತಿ ನಕ್ಷತ್ರ. ಈ ನಕ್ಷತ್ರದಲ್ಲಿ ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೆ ಯಶಸ್ಸು ಗ್ಯಾರಂಟಿ ಎಂದು ಶುಕ್ರವಾರಕ್ಕೆ ಸಂಪುಟ ವಿಸ್ತರಣೆಗೆ ದಿನವನ್ನು ಗೌಡರ ಕುಟುಂಬ ಆಯ್ಕೆ ಮಾಡಿಕೊಂಡಿದೆ ಎಂದು ಅವರ ಕುಟುಂಬದ ಆಪ್ತ ಜ್ಯೋತಿಷಿಗಳು ತಿಳಿಸಿದ್ದಾರೆ.Sign in to your account
Username or Email Address


Password

 Remember Me


