ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಬಂದು ಒಂದು ತಿಂಗಳಾಗಿಲ್ಲ. ಆಗಲೇ ಹಾಸನ ಲೋಕಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕತೂಹಲಕಾರಿಯಾದ ಸಂಗತಿಯೊಂದು ಹರಿದಾಡುತ್ತಿದೆ.ಮಂಡ್ಯದಲ್ಲಿ ಜೋಡೆತ್ತಿನಂತೆ ನಿಂತು ಸುಮಲತಾರ ಗೆಲುವಿಗೆ ಕಾರಣವಾದ ಯಶ್ ಪತ್ನಿ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮುಂದಿನ ಹಾಸನದ ಲೋಕಸಭಾ ಅಭ್ಯರ್ಥಿಯಂತೆ. ಮಂಡ್ಯದಲ್ಲಿ ಸುಮಲತಾ ಕಮಾಲ್ ವರ್ಕೌಟ್ ಆಗಿರೋದರಿಂದ ರಾಧಿಕಾ ಹೆಸರನ್ನು ಹಾಸನದಲ್ಲಿ ತೇಲಿಬಿಡಲಾಗುತ್ತಿದೆ.ಅಲ್ಲದೆ “ಗೌಡ್ತಿ ಯಶ್ ಪತ್ನಿ” ಅಂತ ಬೇರೆ ಫುಲ್ ಪ್ರಚಾರ ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರಚಾರಕ್ಕೆ ಟಾಂಗ್ ಕೊಟ್ಟಿರುವ ನಿಖಿಲ್ ಕುಮಾರಸ್ವಾಮಿ ಫ್ಯಾನ್ಸ್, ಇನ್ನು ಏನೇನು ನೋಡ್ಬೇಕು ಗುರು ಈ ಕಣ್ಣಲ್ಲಿ ಎಂದು ಕಾಲೆಳೆದಿದ್ದಾರೆ.ಒಟ್ಟಿನಲ್ಲಿ ತಮ್ಮ ಮುದ್ದಿನ ಮಗಳ ಜೊತೆ ಸಮಯ ಕಳೆಯುತ್ತಿರುವ ರಾಧಿಕಾ ಪಂಡಿತ್ ಗೆ ರಾಜಕೀಯದ ಬಗ್ಗೆ ಚಿಂತೆಯೇ ಇರದೇ ಇದ್ದರೂ ಅಚ್ಚರಿ ಎಂಬಂತೆ ಅವರ ಹೆಸರು ಕೇಳಿಬಂದಿದೆ. Sign in to your account
Username or Email Address


Password

 Remember Me


