ಚಿಕ್ಕಮಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ 14 ಕೋಳಿ ಮೊಟ್ಟೆ ನುಂಗಿ, ತೆವಳಲಾಗದೆ ಜೀವ ಉಳಿಸಿಕೊಳ್ಳಲು ನರಳಾಡುತ್ತಿದ್ದ ಏಳು ಅಡಿ ಉದ್ದದ ನಾಗರಹಾವೊಂದನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ.ಬಡವನದಿಣ್ಣೆ ಗ್ರಾಮದ ನಿವಾಸಿ ಮಂಜಯ್ಯ ಮನೆಯಲ್ಲಿ ಮರಿಗೆಂದು ಬುಟ್ಟಿಯಲ್ಲಿಟ್ಟಿದ್ದ 14 ಮೊಟ್ಟೆಗಳನ್ನು ನಾಗರ ಹಾವು ನುಂಗಿದೆ. ಮೊಟ್ಟೆ ಕಂಡ ಕೂಡಲೇ ಹಾವು ಆಸೆಯಿಂದ ಎಲ್ಲವನ್ನೂ ನುಂಗಿದೆ. ನಂತರ ಮುಂದೆ ಹೋಗಲಾಗದೆ ನರಳಾಡುತಿತ್ತು. ಇದನ್ನ ಗಮನಿಸ ಮನೆ ಮಾಲೀಕ ಮಂಜಯ್ಯ ಕೂಡಲೇ ಸ್ನೇಕ್ ಆರೀಫ್‍ಗೆ ವಿಷಯ ಮುಟ್ಟಿಸಿದ್ದಾರೆ.ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಅವರು ಮೊದಲು ಮನೆಯೊಳಗಿದ್ದ ಹಾವನ್ನ ಬಯಲು ಪ್ರದೇಶಕ್ಕೆ ತಂದಿದ್ದಾರೆ. ಬಳಿಕ ಅದರ ಬಾಲ ಹಿಡಿದು ಹೊರಳಾಡಿಸುತ್ತಿದ್ದಂತೆ ನುಂಗಿದ್ದ ಎಲ್ಲಾ ಮೊಟ್ಟೆಗಳನ್ನ ಹಾವು ಕಕ್ಕಿ ತನ್ನ ಜೀವ ಉಳಿಸಿಕೊಂಡಿದೆ.ಬಳಿಕ ಹಾವನ್ನು ರಕ್ಷಿಸಿ, ಅದನ್ನು ಸ್ನೇಕ್ ಆರೀಫ್ ಅವರು ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ.https://www.youtube.com/watch?v=ICtheGVDfykSign in to your account
Username or Email Address


Password

 Remember Me


