ಬೆಂಗಳೂರು: ಕಿರುತೆರೆಯ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಈಗ ಸಖತ್ ಬ್ಯುಸಿಯಾಗಿದ್ದು, ಇದೀಗ ಅವರಿಗೆ ಹಿಂದಿಯಲ್ಲಿ ಅಭಿನಯಿಸುವ ಬಂಪರ್ ಆಫರ್ ಬಂದಿದೆ.ಹೌದು..ಅನುಪಮಾ ಕಿರುಚಿತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದು, ಕಿರುಚಿತ್ರಕ್ಕೆ ‘ದಿ ಫಾಲನ್’ ಎಂದು ಟೈಟಲ್ ಇರಿಸಲಾಗಿದೆ. ವಿಶೇಷವೆಂದರೆ ಈ ಕಿರುಚಿತ್ರ ಹಿಂದಿಯಲ್ಲಿ ತಯಾರಾಗುತ್ತಿದೆ. ಸ್ಯಾಂಡಲ್‍ವುಡ್‍ನ ‘ಊರ್ವಿ’ ಖ್ಯಾತಿಯ ನಿರ್ದೇಶಕ ಪ್ರದೀಪ್ ವರ್ಮಾ ಈ ಕಿರುಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.‘ದಿ ಫಾಲನ್’ ಕಿರುಚಿತ್ರ ಬರೋಬ್ಬರಿ 4 ಸಾವಿರ ವರ್ಷಗಳ ಹಿಂದಿನ ಕಥೆಯನ್ನು ಹೊಂದಿದೆಯಂತೆ. ಸದ್ಯಕ್ಕೆ ಅದ್ಧೂರಿಯಾಗಿ ತಯಾರಾಗುತ್ತಿರುವ ಕಿರುಚಿತ್ರಕ್ಕೆ ಫೋಟೋಶೂಟ್ ಮಾಡಿಸುವ ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.‘ದಿ ಫಾಲನ್’ ಕಿರುಚಿತ್ರಕ್ಕೆ ಲೇಹ್, ಲದಾಕ್, ಮನಾಲಿ ಸುತ್ತಮುತ್ತ ಫೋಟೋಶೂಟ್ ಮಾಡಲು ಚಿತ್ರತಂಡ ತಯಾರಿ ಮಾಡುತ್ತಿದೆ. ಜೊತೆಗೆ 30 ದಿನಗಳ ಕಾಲ ಶೂಟಿಂಗ್‍ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ನಟಿ ಅನುಪಮಾ ಗೌಡ ಮೊದಲಿಗೆ ಕಿರುತೆಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ನಂತರ ಬಿಗ್‍ಬಾಸ್‍ ಮನೆಗೆ ಹೋಗಿ ಖ್ಯಾತಿ ಪಡೆದಿದ್ದು, ಇದೀಗ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಇದೆಲ್ಲದರ ಜೊತೆಗೆ ಕಿರುಚಿತ್ರದಲ್ಲಿ ನಟಿಸುತ್ತಿದ್ದಾರೆ.Sign in to your account
Username or Email Address


Password

 Remember Me


