ಶಿವಮೊಗ್ಗ: ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಊಟ-ತಿಂಡಿ ಬಿಟ್ಟು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕಾಗಿನೆಲೆಯಲ್ಲಿ ನಡೆದಿದೆ.ಚೈತ್ರಾ ಮೃತಪಟ್ಟ ಮಹಿಳೆ. ಚೈತ್ರಾಗೆ ಹಾಲಿ ಬೆಂಗಳೂರು ವಾಸಿ ರಾಜು ಜೊತೆ 3 ವರ್ಷದ ಹಿಂದೆ ಮದುವೆ ಆಗಿತ್ತು. ಬೆಂಗಳೂರು ಚಂದಾಪುರದಲ್ಲಿ ಮನೆ ಮಾಡಿದ್ದ ರಾಜು ತನ್ನ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಮತ್ತಷ್ಟು ಹಣ ತರುವಂತೆ ಪೀಡಿಸುತ್ತಿದ್ದನು.ಚೈತ್ರಾ ತಂದೆ ದೊಡ್ಡಬಳ್ಳಾಪುರದಲ್ಲಿ ಇದ್ದು, ಪತಿ- ಪತ್ನಿ ಚೆನ್ನಾಗಿರಲಿ ಎಂದು ರಾಜಿ ಪಂಚಾಯ್ತಿ ಮಾಡಿಸಿದ್ದರು. ಆದರೆ ಇದು ಯಾವುದು ಸರಿ ಆಗದ ಕಾರಣ ಬೇಸರಗೊಂಡ ಚೈತ್ರಾ ಕಳೆದ ವಾರ ಊಟ-ತಿಂಡಿ ಬಿಟ್ಟು ಅಸ್ವಸ್ಥಗೊಂಡಿದ್ದರು.ಚೈತ್ರಾರನ್ನು ಮೊದಲು ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸದ್ಯ ಚೈತ್ರಾ ಪೋಷಕರು ಪತಿ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.ಈ ಬಗ್ಗೆ ಚಂದಾಪುರದ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


