ಬೆಂಗಳೂರು: ರಾಜಕೀಯದ ಬಿಡುವು ಮಾಡಿಕೊಂಡಿರುವ ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಆರ್.ಅಶೋಕ್ ಅವರು ಚಿಣ್ಣರ ಜೊತೆಗೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ.ಬೆಂಗಳೂರಿನ ಪದ್ಮನಾಭ ನಗರದಲ್ಲಿ ಮಕ್ಕಳ ಜೊತೆಗೆ ಆರ್.ಅಶೋಕ್ ಅವರು ಕ್ರಿಕೆಟ್ ಆಡಿದ್ದಾರೆ. ಶಾಲೆಗೆ ಇಂದು ರಜೆ ಇರುವುದರಿಂದ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಮಕ್ಕಳ ಜೊತೆಗೆ ಸೇರಿದ ಆರ್.ಅಶೋಕ್ ಅವರು ಬ್ಯಾಟ್ ಹಿಡಿದು ಮಕ್ಕಳ ಎಸೆತಗಳನ್ನು ಎದುರಿಸಿದರು.ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್ ಕೂಡ ಮಾಡಿ ಮಕ್ಕಳ ಜೊತೆಗೆ ಕೆಲ ಸಮಯ ಕಳೆದಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಕೆಲವರು ಆರ್.ಅಶೋಕ್ ಹಾಗೂ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಮತ್ತೆ ಕೆಲವರು ತಮ್ಮ ಮೊಬೈಲ್‍ನಲ್ಲಿ ಶಾಸಕರು ಕ್ರಿಕೆಟ್ ಆಗುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.Sign in to your account
Username or Email Address


Password

 Remember Me


