ಕಲಬುರಗಿ: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‍ಸಿ) ಪರೀಕ್ಷೆಯಲ್ಲಿ ಗೋಲ್‍ಮಾಲ್ ನಡೆದಿದ್ದು, ವಿರೋಧಿಸಿದ ವಿದ್ಯಾರ್ಥಿಗಳಿಗೆ ಪುಡಿ ರೌಡಿಗಳಿಂದ ಆಡಳಿತ ಮಂಡಳಿ ಅವಾಜ್ ಹಾಕಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.ಕಲಬುರಗಿಯ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆಗೆ ಹಾಜರಾದ ಕೆಲ ಅಭ್ಯರ್ಥಿಗಳಿಗೆ ಖಾಲಿ ಓಎಂಆರ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಪರೀಕ್ಷೆ ನಂತರ ಪರಿಣಿತರಿಂದ ಫುಲ್‍ಫಿಲ್ ಮಾಡಲು ಪ್ಲಾನ್ ಮಾಡಲಾಗಿತ್ತು. ಇದನ್ನು ಕಂಡ ಇತರೆ ಅಭ್ಯರ್ಥಿಗಳು ಇದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗೋಲ್‍ಮಾಲ್ ದೃಶ್ಯ ಸೆರೆ ಹಿಡಿಯುತ್ತಿದ್ದ ಅಭ್ಯರ್ಥಿಗಳಿಗೆ ಅವಾಜ್ ಹಾಕಿದ್ದಾರೆ. ಈ ರೌಡಿಗಳಿಗೆ ಆಡಳಿತ ಮಂಡಳಿ ಸದಸ್ಯರುಗಳೇ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ಈಗಾಗಲೇ ಬ್ಲ್ಯಾಕ್ ಲಿಸ್ಟ್‍ನಲ್ಲಿರುವ ಪ್ರವೀಣ್ ವಿದ್ಯಾಸಂಸ್ಥೆಯಂತಹ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ನೀಡಿದ ಕೆಪಿಸಿಸಿ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


