ಬೆಂಗಳೂರು: ಒಂಡೆದೆ ಸರ್ಕಾರ ಕಾನೂನುಗಳನ್ನು ಬಿಗಿಗೊಳಿಸುತ್ತಿದ್ದರೆ ಮತ್ತೊಂದೆಡೆ ಪುಡಿರೌಡಿಗಳ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುವ ವಾತಾವರಣ ಸೃಷ್ಟಿಯಾದಂತೆ ಕಾಣುತ್ತಿದೆ. ನಡುರಸ್ತೆಯಲ್ಲೇ ಯುವಕನ ಬಟ್ಟೆ ಬಿಚ್ಚಿಸಿ ರೌಡಿ ಪಟಾಲಂ ವಿಕೃತಿ ಮೆರೆದಿರುವ ಬೆಂಗಳೂರಿನ (Bengaluru) ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.ಹೌದು. ರೌಡಿಶೀಟರ್‌ (Rowdy Sheeter) ಪವನ್‌ ಅಲಿಯಾಸ್‌ ಕಡುಬು ಎಂಬಾತ ಕಳೆದ 10-12 ದಿನಗಳ ಹಿಂದೆ ಯುವಕನ ಬಟ್ಟೆ ಬಿಚ್ಚಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮುಖದಲ್ಲಿ ರಕ್ತ ಬರುವಂತೆ ಹೊಡೆದು, ಆವಾಜ್‌ ಹಾಕಿ ಬಟ್ಟೆ ಬಿಚ್ಚಿಸಿದ್ದಾನೆ. ಈ ವೀಡಿಯೋ ‌ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಇದನ್ನೂ ಓದಿ: ಈದ್‌ ಮೆರವಣಿಗೆಗೆ ಪ್ರತಿಯಾಗಿ ಬಜರಂಗದಳ-ವಿಹೆಚ್‌ಪಿಯಿಂದ ಬಿ.ಸಿ ರೋಡ್ ಚಲೋಗೆ ಕರೆಕಾಮಾಕ್ಷಿಪಾಳ್ಯ ಠಾಣಾ (kamakshipalya Police Station) ವ್ಯಾಪ್ತಿಯ ಸುಂಕದಕಟ್ಟೆ ಬಳಿ ಕೃತ್ಯ ನಡೆದಿದೆ. ಪವನ ಅಲಿಯಾಸ್‌ ಕಡುಬು ರಾಜಗೋಪಲನಗರ ರೌಡಿ ಶೀಟರ್ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್ಸಾರ್ವಜನಿಕರಿಂದ ಇಡೀ ಶಾಪ: 
ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿಸಿ ಪುಡಿರೌಡಿಯೊಬ್ಬ ಹಲ್ಲೆ ಮಾಡಿದ್ದಾನೆ. ಈ ವೇಳೆ ಯುವಕ ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಓಡಿದ್ದಾನೆ. ರೌಡಿಗಳ ಕಾಟದಿಂದ ಜನ ನೆಮ್ಮದಿಯಾಗಿ ಓಡಾಡೋದು ಬೇಡ್ವಾ..? ಇಂತಹವರನ್ನ ಕೇಳೋರು ಯಾರೂ ಇಲ್ವಾ? ಅಂತಾ ಸಾರ್ವಜನಿಕರು ಇಡೀ ಶಾಪ ಹಾಕಿದ್ದಾರೆ. ಇದನ್ನೂ ಓದಿ:  ಹದಿಹರೆಯದ ಹುಡುಗಿಯರ ಮಿದುಳಿಗೆ ಬೇಗ ವಯಸ್ಸಾಗ್ತಿದೆಯಂತೆ; ಯಾಕೆ ಗೊತ್ತಾ? – ಅಧ್ಯಯನ ಹೇಳೋದೇನು? Sign in to your account
Username or Email Address


Password

 Remember Me


